ಮುಂಬೈ: ಮಣ್ಣು, ಕಾಗದ ಹಾಗೂ ಇನ್ನಿತರ ವಸ್ತುಗಳನ್ನು ಬಳಸಿ ಗಣೇಶನ ಮೂರ್ತಿ ಮಾಡಿದ್ದನ್ನು ನೋಡಿರುತ್ತೀರಿ. ಆದರೆ ಮುಂಬೈನಲ್ಲಿ ಚಾಕಲೇಟ್ ಹಾಗೂ ಸಿರಿಧಾನ್ಯಗಳನ್ನು ಬಳಸಿ ತಯಾರಿಸಿದ ‘ಬಪ್ಪ’ನ ಮೂರ್ತಿ ಗಮನ ಸೆಳೆಯುತ್ತಿದೆ.

ಮುಂಬೈನ ಸಾಂತಕ್ರೂಸ್ ನಿವಾಸಿ ರಿಂತು ರಾಥೋಡ್ ಎಂಬ ವಿನ್ಯಾಸಕಾರರೊಬ್ಬರು ಚಾಕಲೇಟ್ ಹಾಗೂ 9 ಬಗೆಯ ಸಿರಿಧಾನ್ಯಗಳನ್ನು ಬಳಸಿ 2 ಅಡಿ ಎತ್ತರದ ಗಣಪನ ಮೂರ್ತಿ ತಯಾರಿಸಿದ್ದಾರೆ.

ಎರಡು ಅಡಿ ಎತ್ತರದ ಈ ‘ಬಪ್ಪಾ’, 'ವೃಶ್ಚಿಕಾಸನ' ಅಥವಾ ಚೇಳಿನ ಭಂಗಿಯಲ್ಲಿದೆ.

‘ಈ ಭಂಗಿಯ ಬಗ್ಗೆ ನಮ್ಮ ಪುರಾಣಗಳಲ್ಲಿ ಉಲ್ಲೇಖ ಇದೆ. ನಾನು ಇತ್ತೀಚೆಗಷ್ಟೇ ನ್ಯಾಚುರೋಪತಿ ಕೋರ್ಸ್ ಮುಗಿಸಿದ್ದೆ. ಹೀಗಾಗಿ ಪುರಾಣ ಹಾಗೂ ನ್ಯಾಚುರೋಪತಿಯ ಯೋಚನೆಯನ್ನು ಸಂಯೋಜಿಸಿ ಈ ಭಂಗಿಯಲ್ಲಿ ಮೂರ್ತಿ ರಚಿಸಿದ್ದೇನೆ’ ಎಂದು ರಾಥೋಡ್ ಹೇಳಿದ್ದಾರೆ.

ಈ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನಾಗಿ ಆಚರಿಸಲಾಗುತ್ತಿದೆ. ಹೀಗಾಗಿ ಕೋಕೊ ಹುಡಿ ಹಾಗೂ 9 ಬಗೆಯ ಸಿರಿಧಾನ್ಯಗಳನ್ನು ಬಳಸಿ ಈ ಮೂರ್ತಿ ತಯಾರಿಸಿದ್ದೇನೆ. ಅಂಜೂರಮ ಗೋಡಂಬಿ, ಬಾದಾಮಿ, ಕೇಸರಿ, ಏಲಕ್ಕಿ ಹಾಗೂ ಬೆಲ್ಲವನ್ನು ಬಳಸಿ ಅಂಟು ತಯಾರಿಸಿದ್ದೇನೆ.

ನಲ್ವತ್ತು ಕೆ.ಜಿ ತೂಗುವ ಈ ಮೂರ್ತಿಯನ್ನು ತಯಾರಿಸಿಲು 20 ಗಂಟೆ ತೆಗೆದುಕೊಳ್ಳಲಾಗಿದೆ. ಹವಾನಿಯಂತ್ರಿತ ಕೊಠಡಿಯಲ್ಲಿ ಇದನ್ನು ನಿರ್ಮಿಸಲಾಗಿದೆ.

ಕಳೆದ 12 ವರ್ಷಗಳಿಂದ ರಾಥೋಡ್ ಅವರು ಗಣಪತಿಯ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ.

‘ಕೆಲ ದಿನಗಳ ಹಿಂದೆ ಜುಹು ಬೀಚ್‌ನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಎರಡು ಗಣೇಶ ಮೂರ್ತಿಗಳು ಮರಳಿನಲ್ಲಿ ಬಿದ್ದಿರುವುದನ್ನು ನೋಡಿ ಬೇಸರವಾಯಿತು. ಪರಿಸರಕ್ಕೆ ಹಾನಿ ಉಂಟಾಗದ ಮನೆಯಲ್ಲಿ ವಿಸರ್ಜನೆ ಮಡುವ ಮೂರ್ತಿಯನ್ನು ತಯಾರಿಸುವ ಯೋಚನೆ ಆಗ ಬಂತು’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.