ಮೆಹಸಾನ: ಗುಜರಾತ್‌ನ ಮೆಹಸಾನ ಜಿಲ್ಲೆಯ ಕಸಲ್‌ಪುರ ಗ್ರಾಮದ ಬಳಿಯ ಒಎನ್‌ಜಿಸಿ (ತೈಲ ಮತ್ತು ನೈಸರ್ಗಿಕ ಅನಿಲ ನಿಗಮ) ಬಾವಿಯಲ್ಲಿ ಭಾರೀ ಸ್ಫೋಟವಾಗಿದ್ದು, ನಂತರ ಅನಿಲ ಸೋರಿಕೆಯಾಗಿದೆ. ಹೀಗಾಗಿ 2 ಕಿಲೊ ಮೀಟರ್ ವ್ಯಾಪ್ತಿಯಲ್ಲಿರುವ 10ರಿಂದ 12 ಹಳ್ಳಿಗಳ ಜನರಿಗೆ ತೊಂದರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಿಲ ಸೋರಿಕೆ ತಡೆಯಲು ಒಎನ್‌ಜಿಸಿ ತಂಡ ಕಾರ್ಯ ನಿರ್ವಹಿಸುತ್ತಿದೆ.

ಗುರುವಾರ ರಾತ್ರಿ 1 ಗಂಟೆ ಸುಮಾರಿನಲ್ಲಿ ಈ ಸ್ಫೋಟವಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

4 ಕಿ. ಮೀ ವ್ಯಾಪ್ತಿಯ ಜನರು ಸ್ಫೋಟದ ಸದ್ದು ಕೇಳಿಸಿಕೊಂಡಿದ್ದಾರೆ. ನಂತರ ಸೋರಿಕೆಯಾದ ಅನಿಲವು ಸುಮಾರು 2 ಕಿ.ಮೀ ಪ್ರದೇಶಕ್ಕೆ ಹರಡಿದೆ ಎಂದು ಬೆಚರಾಜಿ ಶಾಸಕ ಭಾರತ್‌ಜಿ ಠಾಕೂರ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಒಎನ್‌ಜಿಸಿ ತಂಡಗಳು ಸೋರಿಕೆ ತಡೆ ಕೆಲಸ ಆರಂಭಿಸಿವೆ, ಆದರೆ ಸೋರಿಕೆ ಇನ್ನೂ ನಿಂತಿಲ್ಲ ಎಂದು ಅವರು ತಿಳಿಸಿದ್ದಾರೆ.

ಸ್ಫೋಟ ಸಂಭವಿಸಿದ ಕೂಡಲೇ ಒಎನ್‌ಜಿಸಿಗೆ ಮಾಹಿತಿ ನೀಡಲಾಗಿದೆ ಎಂದು ಕಸಲ್‌ಪುರ ಗ್ರಾಮದ ಸರಪಂಚ್ ಕಾಂತಿ ಚಾವಡಾ ತಿಳಿಸಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಗ್ರಾಮಸ್ಥರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆರೋಗ್ಯದ ತುರ್ತು ಪರಿಸ್ಥಿತಿ ಎದುರಿಸಲು ಗ್ರಾಮಗಳಲ್ಲಿ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ

ತೈಲೋತ್ಪಾದನೆಗೆ ದೇಸಿ ರಿಗ್: ಇಂಧನ ಕ್ಷೇತ್ರದಲ್ಲಿ ‘ಎಂಇಐಎಲ್’ನ ಸ್ವಾವಲಂಬನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.