ಅಹಮದಾಬಾದ್: ಗೋಧ್ರೋತ್ತರ ಹಿಂಸಾಚಾರದ ಸಂದರ್ಭದಲ್ಲಿ 69 ಜನರ ಹತ್ಯೆ ನಡೆದಿದ್ದ ಇಲ್ಲಿನ ಗುಲ್ಬರ್ಗ್ ಸೊಸೈಟಿಯಲ್ಲಿ ಈಚೆಗೆ ಸಂಭ್ರಮದ ಕಾರ್ಯಕ್ರಮವೊಂದು ಆಯೋಜನೆ ಆಗಿತ್ತು. ಇಲ್ಲಿ ಈಗ ಉಳಿದಿರುವ ಏಕೈಕ ಕುಟುಂಬವೊಂದು ವಿವಾಹಪೂರ್ವ ಸಂಭ್ರಮಾಚರಣೆಯನ್ನು ಆಯೋಜಿಸಿತ್ತು.

ಗುಲ್ಬರ್ಗ್ ಸೊಸೈಟಿ ಪ್ರದೇಶವು ಈಗ ಮೊದಲಿನಂತೆ ಇಲ್ಲ, ಅದು ಹಾಳಾಗಿದೆ. ಅಲ್ಲಿ ಈಗ ಮನ್ಸುರಿ ಕುಟುಂಬ ಮಾತ್ರ ವಾಸಿಸುತ್ತಿದೆ. ಕುಟುಂಬದ 18 ವರ್ಷ ವಯಸ್ಸಿನ ಮಿಸ್ಬಾ ಅವರ ಮದುವೆಗೆ ಮೊದಲಿನ ‘ಹಲ್ದಿ ಕಿ ರಸ್ಮ್’ (ಹಳದಿ ಶಾಸ್ತ್ರ) ಕಾರ್ಯಕ್ರಮವನ್ನು ಕುಟುಂಬವು ಸೋಮವಾರ ಸಂಭ್ರಮದಿಂದ ಆಚರಿಸಿದೆ.

ಹಿಂದೆ ಗುಲ್ಬರ್ಗ್ ಸೊಸೈಟಿಯಲ್ಲಿ ನೆರೆಹೊರೆಯವರಾಗಿದ್ದ ಕೆಲವರು ಮಾತ್ರ ಕಾರ್ಯಕ್ರಮಕ್ಕೆ ಬಂದಿದ್ದರು. ‘ನಾನು ಗುಲ್ಬರ್ಗ್ ಸೊಸೈಟಿಯಲ್ಲಿ ಇದ್ದ ಎಲ್ಲರನ್ನೂ ಆಹ್ವಾನಿಸಿದ್ದೆ. ಆದರೆ ನಾಲ್ಕರಿಂದ ಐದು ಮಂದಿ ಮಾತ್ರ ಕಾರ್ಯಕ್ರಮಕ್ಕೆ ಬಂದಿದ್ದರು’ ಎಂದು ರಫೀಕ್ ಮನ್ಸುರಿ ಅವರು ತಿಳಿಸಿದರು. ‘ಹಿಂದೂ ಸಮುದಾಯಕ್ಕೆ ಸೇರಿದ ಹಲವರು ಕಾರ್ಯಕ್ರಮಕ್ಕೆ ಬಂದಿದ್ದರು’ ಎಂದು ಅವರು ಹೇಳಿದರು.

ಗುಲ್ಬರ್ಗ್ ಸೊಸೈಟಿಯಲ್ಲಿ ಹಿಂಸಾಚಾರ ನಡೆದಾಗ ರಫೀಕ್ ಅವರಿಗೆ 30 ವರ್ಷ ವಯಸ್ಸಾಗಿತ್ತು. ಆ ಹಿಂಸಾಚಾರದಲ್ಲಿ ರಫೀಕ್ ಅವರು ಪತ್ನಿ ಮತ್ತು ಮಗನನ್ನು ಕಳೆದುಕೊಂಡಿದ್ದರು. ನಂತರ ಅವರು ಮಧ್ಯಪ್ರದೇಶದಲ್ಲಿ ತಸ್ಲೀಂ ಎನ್ನುವವರನ್ನು ಮದುವೆಯಾದರು. ‘ಹಿಂಸಾಚಾರ ನಡೆದ ನಂತರದಲ್ಲಿ ಸೊಸೈಟಿಯಲ್ಲಿ ಇಂತಹ ಸಂಭ್ರಮದ ಕಾರ್ಯಕ್ರಮ ನಡೆದಿರುವುದು ಇದೇ ಮೊದಲು’ ಎಂದರು. ಮಿಸ್ಬಾ ಅವರ ವಿವಾಹ ಕಾರ್ಯಕ್ರಮವು ಮಧ್ಯಪ್ರದೇಶದ ಬಡವಾನಿಯಲ್ಲಿ ಬುಧವಾರ ನಡೆಯಿತು. ರಫೀಕ್ ಅವರ ಮನೆಯು ಸೊಸೈಟಿಯ ಪ್ರವೇಶದಲ್ಲಿಯೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.