ನವದೆಹಲಿ: ‘ನನ್ನನ್ನು ಜೈಲಿಗೆ ಕಳುಹಿಸಿದರೂ, ಜನರಿಗಾಗಿ ನಡೆಯುತ್ತಿರುವ ನನ್ನ ಸರ್ಕಾರದ ಅಭಿವೃದ್ಧಿ ಕಾರ್ಯಗಳು ನಿಲ್ಲವುದಿಲ್ಲ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದರು.

ಇಲ್ಲಿನ ಕಿರಾರಿಯಲ್ಲಿ ಎರಡು ಶಾಲಾ ಕಟ್ಟಡಗಳ ಶಂಕುಸ್ಠಾಪನೆ ನೆರವೇರಿಸಿ ಮಾತನಾಡಿದ ಅವರು, ‘ನಾನು ಅವರ ಪಕ್ಷ ಸೇರಬೇಕು ಎಂದು ಬಿಜೆಪಿ ಬಯಸುತ್ತಿದೆ. ಆದರೆ ನಾನು ಅವರಿಗೆ ತಲೆಬಾಗುವುದಿಲ್ಲ’ ಎಂದರು.

‘ಶಾಲೆಗಳನ್ನು ನಿರ್ಮಿಸಿದ್ದಕ್ಕಾಗಿ ಮನೀಷ್ ಸಿಸೋಡಿಯಾ ಅವರನ್ನು, ಮೊಹಲ್ಲಾ ಕ್ಲಿನಿಕ್‌ಗಳನ್ನು ನಿರ್ಮಿಸಿದ್ದಕ್ಕಾಗಿ ಸತ್ಯೇಂದ್ರ ಜೈನ್ ಅವರನ್ನು ಜೈಲಿಗಟ್ಟಿದ್ದಾರೆ’ ಎಂದು ಕಿಡಿಕಾರಿದರು.

‘ಒಂದು ವೇಳೆ ನೀವು ಕೇಜ್ರಿವಾಲ್ ಅವರನ್ನು ಜೈಲಿಗೆ ಹಾಕಿದರೂ, ಶಾಲೆಗಳು ಮತ್ತು ಮೊಹಲ್ಲಾ ಕ್ಲಿನಿಕ್‌ಗಳ ನಿರ್ಮಾಣ ಹಾಗೂ ದೆಹಲಿ ಜನರಿಗೆ ಸಿಗುತ್ತಿರುವ ಉಚಿತ ಚಿಕಿತ್ಸಾ ಕೆಲಸ ಕಾರ್ಯಗಳೂ ನಿಲ್ಲುವುದಿಲ್ಲ’ ಎಂದು ಅವರು ಗುಡುಗಿದರು.

ಕೇಂದ್ರ ಬಜೆಟ್ ವಿರುದ್ಧ ಕಿಡಿ:

ಕೇಂದ್ರ ಬಜೆಟ್ ಕುರಿತು ಪ್ರಸ್ತಾಪಿಸಿದ ಅವರು, ದೆಹಲಿ ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಶೇ 40ರಷ್ಟು ಖರ್ಚು ಮಾಡುತ್ತಿದ್ದರೆ, ಕೇಂದ್ರ ಸರ್ಕಾರ ಈ ಕ್ಷೇತ್ರಗಳಿಗೆ ಕೇವಲ ಶೇ 4ರಷ್ಟನ್ನು ಮೀಸಲಿಟ್ಟಿದೆ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.