ನವದೆಹಲಿ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) 272 ಸಿಬ್ಬಂದಿಯನ್ನು ಏಕತಾ ಪ್ರತಿಮೆಯ ಭದ್ರತೆಗೆ ನಿಯೋಜಿಸಲಾಗುತ್ತಿದೆ.

ಗುಜರಾತ್ನಲ್ಲಿ ನರ್ಮದಾ ಸರೋವರದ ದಂಡೆಯ ಮೇಲೆ ನಿರ್ಮಿಸಲಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ 'ಏಕತಾ ಪ್ರತಿಮೆ'ಗೆ ಸಿಐಎಸ್ಎಫ್ ಸಿಬ್ಬಂದಿ ಕಾವಲು ಇರಲಿದ್ದಾರೆ. ಆ ಬಗ್ಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಸಮ್ಮತಿ ಸೂಚಿಸಿದೆ.

ಕೆವಾಡಿಯಾದಲ್ಲಿರುವ ಪ್ರತಿಮೆಗೆ ಆಗಸ್ಟ್ 25ರಿಂದ ಮೊದಲ ಹಂತದಲ್ಲಿ ಸಿಐಎಸ್ಎಫ್ನ 272 ಸಿಬ್ಬಂದಿ ಭದ್ರತೆಯಲ್ಲಿರಲಿದ್ದಾರೆ. ಅದರ ಸಂಬಂಧ ಗೃಹ ವ್ಯವಹಾರಗಳ ಸಚಿವಾಲಯವು ಸಿಐಎಸ್ಎಫ್ ಡಿಜಿ ರಾಜೇಶ್ ರಂಜನ್ ಅವರಿಗೆ ಪತ್ರ ರವಾನಿಸಿದೆ.

ದೆಹಲಿಯ ಮೆಟ್ರೊ ಹಾಗೂ ದೇಶದ ಬಹುತೇಕ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಸಿಐಎಸ್ಎಫ್ ಭದ್ರತೆ ನೀಡುತ್ತಿದೆ. ಕೋವಿಡ್–19 ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಳೆದ ಕೆಲವು ತಿಂಗಳಿಂದ ಏಕತಾ ಪ್ರತಿಮೆಯ ಸ್ಥಳಕ್ಕೆ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಿದ್ದು, ಸೆಪ್ಟೆಂಬರ್ 2ರಿಂದ ಪ್ರವೇಶ ಅವಕಾಶ ನೀಡುವ ಸಾಧ್ಯತೆ ಇರುವುದಾಗಿ ಎಎನ್ಐ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.