ಅಹಮದಾಬಾದ್: ಕಟ್ಟಡ ಕಾರ್ಮಿಕರಿಗೆ ನೆರವಾಗಲು ಗುಜರಾತ್ನಲ್ಲಿ ತಾತ್ಕಾಲಿಕ ಸೂರು ಒದಗಿಸುವ ‘ಶ್ರಮಿಕ್ ಬಸೇರ’ ಯೋಜನೆಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಗುರುವಾರ ಚಾಲನೆ ನೀಡಿದರು.

ಕಾರ್ಮಿಕರ ವಸತಿಗೆ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆ ಇದಾಗಿದ್ದು, ದಿನಕ್ಕೆ ₹5 ಬಾಡಿಗೆಯನ್ನು ನಿಗದಿಪಡಿಸಲಾಗಿದೆ.

ಅಹಮದಾಬಾದ್, ಗಾಂಧಿನಗರ, ವಡೋದರಾ ಮತ್ತು ರಾಜ್ಕೋಟ್ನಲ್ಲಿ ಕೂಲಿಕಾರ್ಮಿಕರ ವಸತಿಗಾಗಿ 17 ವಸತಿ ಕಟ್ಟಡಗಳು ಸ್ಥಾಪನೆಯಾಗಲಿವೆ.

ಅಹಮದಾಬಾದ್ನಲ್ಲಿ ಶಂಕುಸ್ಥಾಪನೆಯನ್ನು ನೆರವೇರಿಸಿದ ಸಿಎಂ, ಉಳಿದ ಪ್ರದೇಶಗಳಲ್ಲಿ ವಸತಿ ಕಟ್ಟಡ ನಿರ್ಮಾಣಕ್ಕೆ ವರ್ಚುವಲ್ ಮೂಲಕ ಚಾಲನೆ ನೀಡಿದರು.

ಇದೇ ವೇಳೆ ಈ ಯೋಜನೆಯ ‘ಶ್ರಮಿಕ್ ಬಸೇರಾ’ ಎನ್ನುವ ಪೋರ್ಟಲ್ ಅನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ಈ ಯೋಜನೆಯಿಂದ 15 ಸಾವಿರ ಕಾರ್ಮಿಕರಿಗೆ ಪ್ರಯೋಜನ ಸಿಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ವಸತಿ ಕಟ್ಟಡ ನಿರ್ಮಿಸಿ, 3 ಲಕ್ಷ ಕಾರ್ಮಿಕರಿಗೆ ನೆರವಾಗುವ ಯೋಜನೆಯಿದೆ. ಈ ಯೋಜನೆಗೆ ₹1,500 ಕೋಟಿ ವೆಚ್ಚ ತಗುಲಲಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.