ತ್ರಿಶ್ಯೂರ್: ಗುರುವಾಯೂರಿನ ಪ್ರಸಿದ್ಧ ಶ್ರೀ ಕೃಷ್ಣ ದೇವಾಲಯವು ಮಹೀಂದ್ರಾ ಕಂಪನಿಯ ಕೆಂಪು ಬಣ್ಣದ 'ಥಾರ್' ಲಿಮಿಟೆಡ್ ಎಡಿಷನ್ ವಾಹನವನ್ನು ಮತ್ತೆ ಹರಾಜು ಹಾಕಿದ್ದು, ₹43 ಲಕ್ಷಕ್ಕೆ ಮಾರಾಟವಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಇದೇ ಥಾರ್ ಅನ್ನು ದೇವಾಲಯವು ಹರಾಜು ಹಾಕಿತ್ತು. ಆಗ ಬಹ್ರೇನ್ ಮೂಲದ ಮಲಯಾಳಿ ಅಮಲ್ ಮೊಹಮ್ಮದ್ ಅಲಿ ಎಂಬುವವರು ₹15.10 ಲಕ್ಷಕ್ಕೆ ಕೂಗುವ ಮೂಲಕ ಬಿಡ್‌ನಲ್ಲಿ ಗೆಲುವು ಪಡೆದಿದ್ದರು. ಆಗ ಅಲಿ ಒಬ್ಬರೇ ಬಿಡ್ ಸಲ್ಲಿಸಿದ್ದವರು. ಆದರೆ, ಅವರಿಗೆ ಥಾರ್ ಒಪ್ಪಿಸುವುದರ ಸಂಬಂಧ ವಿವಾದ ಸೃಷ್ಟಿಯಾಗಿತ್ತು ಹಾಗೂ ಪ್ರಕರಣವು ಕೋರ್ಟ್ ಮೆಟ್ಟಿಲೇರಿತ್ತು.

ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಲಿಮಟೆಡ್ ಎಡಿಷನ್ ಎಸ್‌ಯುವಿ (ಥಾರ್) ಅನ್ನು ತಮ್ಮದಾಗಿಸಿಕೊಳ್ಳಲು 15 ಜನರು ಬಿಡ್ ಸಲ್ಲಿಸಿದ್ದರು. ಜಿದ್ದಾಜಿದ್ದಿನ ಬಿಡ್ ₹43 ಲಕ್ಷದವರೆಗೂ ಮುಂದುವರಿಯಿತು. ಥಾರ್‌ಗೆ ₹15 ಲಕ್ಷ ಮೂಲ ಬೆಲೆ ನಿಗದಿಯಾಗಿತ್ತು.

'ಬಿಡ್ ಮೊತ್ತ ಎಷ್ಟಾದರೂ ಸರಿಯೇ ವಾಹನವನ್ನು ತಮ್ಮದಾಗಿಸಿಕೊಳ್ಳುವಂತೆ ದುಬೈನಲ್ಲಿರುವ ಉದ್ಯಮಿ ವಿಗ್ನೇಶ್ ವಿಜಯಕುಮಾರ್ ತಮ್ಮ ಏಜೆಂಟರಿಗೆ ತಿಳಿಸಿದ್ದರು' ಎಂದು ವಿಗ್ನೇಶ್ ಅವರ ತಂದೆ ಟಿವಿ ಚಾನೆಲ್‌ವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ–ಪ್ರವಾದಿ ವಿಚಾರ: 'ಮತಾಂಧರನ್ನು ಶ್ಲಾಘಿಸಿ ಸ್ಮಾರಕ ನಿರ್ಮಿಸುವವರು'–ಪಾಕ್ಗೆ ಭಾರತ

ವಿಗ್ನೇಶ್ ತಮ್ಮ ಪಾಲಕರಿಗಾಗಿ ಥಾರ್ ಅನ್ನು ಗೆಲ್ಲಲು ಬಯಸಿದ್ದರು. ವಾಹನವನ್ನು ಮನೆಗೆ ತೆಗೆದುಕೊಂಡು ಹೋಗುವುದಕ್ಕೂ ಮುನ್ನ ನಿಗದಿತ ಜಿಎಸ್‌ಟಿ ಸಹ ಪಾವತಿಸಬೇಕಿದೆ.

ಈ ಹಿಂದಿನ ಹರಾಜಿನಲ್ಲಿ ಬಿಡ್ ಗೆದ್ದಿದ್ದ ಅಲಿ ಅವರಿಗೆ ಥಾರ್ ಒಪ್ಪಿಸಲು ಗುರುವಾಯೂರು ದೇವಸ್ಥಾನದ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆ ವಿಚಾರವು ಕೇರಳ ಹೈಕೋರ್ಟ್ ಮೆಟ್ಟಿಲೇರಿತ್ತು. ಆ ವಿಚಾರವನ್ನು ಸಾರ್ವಜನಿಕ ಸಮಕ್ಷಮದಲ್ಲಿಬಗೆಹರಿಸಿಕೊಳ್ಳಲುಕೋರ್ಟ್ ಸೂಚಿಸಿತ್ತು. ಅಲ್ಲಿ ವಾಹನವನ್ನು ಮತ್ತೆ ಹರಾಜು ಹಾಕುವ ನಿರ್ಧಾರಕ್ಕೆ ಬರಲಾಗಿತ್ತು.

ಇದನ್ನೂ ಓದಿ–ಪಾಸ್ಪೋರ್ಟ್ ನೀಡುವಂತೆ ಕೋರ್ಟ್ಗೆ ಲಾಲು ಪ್ರಸಾದ್ ಮನವಿ; ಕಿಡ್ನಿ ಕಸಿಗಾಗಿ ವಿದೇಶಕ್ಕೆ ಪ್ರಯಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.