ಬೆಂಗಳೂರು: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಮಲೇಷ್ಯಾದ ಕೌಲಾಲಂಪುರ್ನಲ್ಲಿ ಕಚೇರಿ ತೆರೆಯುವುದಾಗಿ ಹೇಳಿದೆ.

ದೇಶಿ ನಿರ್ಮಿತ ಲಘು ಯುದ್ಧ ವಿಮಾನ ‘ತೇಜಸ್‘ ಅನ್ನು ಮಲೇಷ್ಯಾಗೆ ರಫ್ತು ಮಾಡುವ ಸಂಬಂಧ ಎಚ್ಎಎಲ್, ಮುಂದಿನ ದಿನಗಳಲ್ಲಿ ಹೆಚ್ಚಿನ ಯುದ್ಧವಿಮಾನ ಪೂರೈಕೆ, ಉದ್ಯಮ ವಿಸ್ತರಣೆ ಮತ್ತು ಸಹಕಾರಕ್ಕೆ ಪೂರಕವಾಗಿ ಕಚೇರಿ ತೆರೆಯುತ್ತಿರುವುದಾಗಿ ಹೇಳಿದೆ.

ತೇಜಸ್ ಯುದ್ಧ ವಿಮಾನ ಖರೀದಿಗೆ ಮಲೇಷ್ಯಾ ಆಸಕ್ತಿ ತೋರಿದೆ ಎನ್ನಲಾಗಿದೆ. ಹೀಗಾಗಿ, ಅಲ್ಲಿ ಕಚೇರಿ ತೆರೆದರೆ, ಮುಂದಿನ ದಿನಗಳಲ್ಲಿ ವ್ಯಾಪಾರ–ಒಪ್ಪಂದ ಮತ್ತು ರಫ್ತು ಕೆಲಸಗಳಿಗೆ ಅನುಕೂಲವಾಗಲಿದೆ.

ಮುಂಬೈ: ಎ.ಸಿ ಡಬಲ್ ಡೆಕರ್ ಬಸ್ಗೆ ಚಾಲನೆ

ರಾಯಲ್ ಮಲೇಷ್ಯಾ ಏರ್ ಪೋರ್ಸ್ನ ಜಾಗತಿಕ ಟೆಂಡರ್ಗೆ ಅನುಗುಣವಾಗಿ ಬೇಡಿಕೆ ಇರುವ ಯುದ್ಧವಿಮಾನ ಪೂರೈಕೆಗೆ ಎಚ್ಎಎಲ್ ಪ್ರಸ್ತಾವನೆ ಸಲ್ಲಿಸಿದೆ. 18 ತೇಜಸ್ ಯುದ್ಧವಿಮಾನ ಪೂರೈಸುವ ಗುರಿಯನ್ನು ಎಚ್ಎಎಲ್ ಹೊಂದಿದ್ದು, ಪ್ರಸ್ತಾವನೆಯನ್ನು ಕಳುಹಿಸಿಕೊಟ್ಟಿದೆ.

ಸಮರಾಭ್ಯಾಸ: ಥಾಯ್ಲೆಂಡ್ಗೆ ಯುದ್ಧವಿಮಾನ ಕಳುಹಿಸಿದ ಚೀನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.