ಚಂಡಿಗಡ: ಪಾಣಿಪತ್ನಿಂದ ಹರಿಯಾಣದ ಸಿರ್ಸಾಗೆ ದ್ರವೀಕೃತ ವೈದ್ಯಕೀಯ ಆಮ್ಲಜನಕದ ಸಾಗಿಸುತ್ತಿದ್ದ ಟ್ಯಾಂಕರ್ ವಾಹನವೊಂದು ಶುಕ್ರವಾರ ನಾಪತ್ತೆಯಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಔಷಧ ನಿಯಂತ್ರಕರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪಾಣಿಪತ್ ಪೊಲೀಸರು ತಿಳಿಸಿದ್ದಾರೆ.

ದೆಹಲಿ ಸರ್ಕಾರದಿಂದ ಲೂಟಿ–ಆರೋಪ:ಪಾಣಿಪತ್ನಿಂದ ಫರಿದಾಬಾದ್ ಕೋವಿಡ್ ಆಸ್ಪತ್ರೆಗಳಿಗೆ ಆಮ್ಲಜನಕ ಸಾಗಿಸುತ್ತಿದ್ದ ವಾಹನವನ್ನು ದೆಹಲಿ ಸರ್ಕಾರ ದರೋಡೆ ಮಾಡಿದೆ ಎಂದು ಹರಿಯಾಣದ ಗೃಹ ಮತ್ತು ಆರೋಗ್ಯ ಖಾತೆ ಸಚಿವ ಅನಿಲ್ ವಿಜ್ ಆರೋಪಿಸಿದ್ದಾರೆ.

ಪಾಣಿಪತ್ನಿಂದ ಹೊರಟ ಆಮ್ಲಜನಕ ತುಂಬಿದ ಟ್ಯಾಂಕರ್ ಕೇಂದ್ರಾಡಳಿತದ ಸರಹದ್ದಿನಲ್ಲಿ ಹಾದು ಹೋಗುವಾಗ ದೆಹಲಿ ಸರ್ಕಾರ ಲೂಟಿ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.