ಚರಕೀ ದಾದರೀ (ಹರಿಯಾಣ):ಪ್ರಧಾನಿ ನರೇಂದ್ರ ಮೋದಿಯವರ ‘ಬೇಟಿ ಬಚಾವೋ ಬೇಟಿ ಪಢಾವೋ’ ಅಭಿಯಾನವನ್ನು ಕ್ರೀಡಾ ಕ್ಷೇತ್ರಕ್ಕೂ ವಿಸ್ತರಿಸಲು ಮನ ಮಾಡಿದ್ದಾರೆ ಹರಿಯಾಣದಚರಕೀ ದಾದರೀ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಬಿತಾ ಪೋಗಟ್.

ಕ್ಷೇತ್ರದಾದ್ಯಂತ ಸಂಚರಿಸಿ ದಿನವಿಡೀ ಚುನಾವಣಾ ಪ್ರಚಾರದ ನಡೆಸಿದ ಅವರು, ‘ನಮಗೆ ಮತ ನೀಡಿ ಗೆಲ್ಲಿಸಿದರೆ ಬೇಟಿ ಬಚಾವೋ ಬೇಟಿ ಪಢಾವೋ ಬೇಟಿ ಖಿಲಾವೊ (ಮಗಳನ್ನು ರಕ್ಷಿಸಿ, ಶಿಕ್ಷಣ ನೀಡಿ ಮತ್ತು ಕ್ರೀಡೆಯತ್ತ ಉತ್ತೇಜಿಸಿ) ಯೋಜನೆ’ ಹಮ್ಮಿಕೊಳ್ಳಲಿದ್ದೇವೆ ಎಂದು ಮತದಾರರಿಗೆ ಭರವಸೆ ನೀಡಿದ್ದಾರೆ. ಅಂತರರಾಷ್ಟ್ರೀಯ ಕುಸ್ತಿಪಟು ಬಬಿತಾ ಪೋಗಟ್ ಅವರು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಎರಡು ಬಾರಿ ಚಿನ್ನದ ಪದಕ ಜಯಿಸಿದ್ದಾರೆ.

ಇದನ್ನೂ ಓದಿ:ಹರಿಯಾಣ: ಕ್ರೀಡಾಳುಗಳಿಗೆ ಬಿಜೆಪಿ ಮಣೆ; ಯೋಗೇಶ್ವರ ದತ್, ಬಬಿತಾ ಪೋಗಟ್ಗೆ ಟಿಕೆಟ್

ಪೋಗಟ್ ಅವರು ಕಾಂಗ್ರೆಸ್‌ನ ನೃಪೇಂದ್ರ ಸಿಂಗ್ ಸಾಂಗ್ವಾನ್, ಸ್ವತಂತ್ರ ಅಭ್ಯರ್ಥಿ ಸೋಂಬೀರ್ ಸಾಂಗ್ವಾನ್ ಮತ್ತು ಜನನಾಯಕ್ ಜನತಾ ಪಕ್ಷದ ಸತ್ಪಾಲ್ ಸಾಂಗ್ವಾನ್ ವಿರುದ್ಧ ಕಣಕ್ಕಿಳಿದಿದ್ದಾರೆ. ನೃಪೇಂದ್ರ ಸಿಂಗ್ ಸಾಂಗ್ವಾನ್ ಮತ್ತುಸತ್ಪಾಲ್ ಸಾಂಗ್ವಾನ್ ಮಾಜಿ ಶಾಸಕರಾಗಿದ್ದು,ಸೋಂಬೀರ್ ಸಾಂಗ್ವಾನ್ 2014ರ ವಿಧಾನಸಭೆ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದರು.

ಈವರೆಗಿನ ಚುನಾವಣಾ ದಾಖಲೆಗಳ ಪ್ರಕಾರ ಈ ಕ್ಷೇತ್ರದಲ್ಲಿ ಯಾವನೇ ಅಭ್ಯರ್ಥಿಯೂ ಸತತ ಎರಡು ಬಾರಿ ಜಯ ಗಳಿಸಿಲ್ಲ. ಕಳೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಗೆಲುವಿನ ಅಂತರ 2,000 ಮತಗಳಿಗಿಂತ ಕಡಿಮೆಯೇ ಇದೆ.

ಹರಿಯಾಣ ಪೊಲೀಸ್‌ನ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ಪೋಗಟ್ ಸೆಪ್ಟೆಂಬರ್‌ನಲ್ಲಿ ರಾಜೀನಾಮೆ ನೀಡಿದ್ದರು.

ಇನ್ನಷ್ಟು...

ಬಿಜೆಪಿಗೆ ಕುಸ್ತಿಪಟು ಬಬಿತಾ ಪೋಗಟ್ ಸೇರ್ಪಡೆ

ಪೊಲೀಸ್ ಹುದ್ದೆಗೆ ಬಬಿತಾ ಪೋಗಟ್ ರಾಜೀನಾಮೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.