ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಭಾನುವಾರ ತಡರಾತ್ರಿ ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಉಚ್ಚಾನಾ ಕ್ಷೇತ್ರದಿಂದ ಬ್ರಿಜೇಂದ್ರ ಸಿಂಗ್ ಮತ್ತು ಗುರುಗ್ರಾಮ ಕ್ಷೇತ್ರದಿಂದ ಮೋಹಿತ್ ಗ್ರೋವರ್ ಅವರನ್ನು ಕಣಕ್ಕಿಳಿಸಿದೆ.

ಇದರೊಂದಿಗೆ 90 ಸದಸ್ಯ ಬಲದ ವಿಧಾನಸಭೆಗೆ ಕಾಂಗ್ರೆಸ್ ಇದುವರೆಗೆ ಒಟ್ಟು 41 ಅಭ್ಯರ್ಥಿಗಳನ್ನು ಪ್ರಕಟಿಸಿದೆ.

ಭಿವಾನಿ ಜಿಲ್ಲೆಯ ತೋಷಮ್ ಕ್ಷೇತ್ರದಿಂದ ಅನಿರುದ್ಧ ಚೌಧರಿ, ಥಾನೇಸರ್ ಕ್ಷೇತ್ರದಿಂದ ಅಶೋಕ್ ಅರೋರಾ, ಗನೌರ್ ಕ್ಷೇತ್ರದಿಂದ ಕುಲದೀಪ್ ಶರ್ಮಾ, ತೋಹಾನಾ ಕ್ಷೇತ್ರದಿಂದ ಪರಮ್‌ವೀರ್ ಸಿಂಗ್, ಮೆಹಮ್ ಕ್ಷೇತ್ರದಿಂದ ಬಲರಾಮ್ ಡಾಂಗಿ, ನಂಗಲ್ ಚೌಧರಿ ಕ್ಷೇತ್ರದಿಂದ ಮಂಜು ಚೌಧರಿ ಮತ್ತು ಬಾದ್‌ಶಾಪುರ ಕ್ಷೇತ್ರದಿಂದ ವರ್ಧನ್ ಯಾದವ್ ಅವರನ್ನು ಕಣಕ್ಕಿಳಿಸಿದೆ.

ಹರಿಯಾಣದ ಮಾಜಿ ಮುಖ್ಯಮಂತ್ರಿ ದಿವಂಗತ ಬನ್ಸಿ ಲಾಲ್ ಅವರ ಇಬ್ಬರು ಮೊಮ್ಮಕ್ಕಳಾದ ಅನಿರುದ್ಧ ಚೌಧರಿ–ಶ್ರುತಿ ಚೌಧರಿ ನಡುವಿನ ಹಣಾಹಣಿಗೆ ತೋಷಮ್ ವಿಧಾನಸಭಾ ಕ್ಷೇತ್ರ ಸಾಕ್ಷಿಯಾಗಲಿದೆ.

ಬ್ರಿಜೇಂದ್ರ ಸಿಂಗ್ ಅವರು ಮಾಜಿ ಕೇಂದ್ರ ಸಚಿವ ಬಿರೇಂದರ್ ಸಿಂಗ್ ಅವರ ಪುತ್ರರಾಗಿದ್ದು, ಮಾಜಿ ಉಪ ಮುಖ್ಯಮಂತ್ರಿ ಮತ್ತು ಹಾಲಿ ಜೆಜೆಪಿ ಶಾಸಕ ದುಷ್ಯಂತ್ ಚೌಟಾಲಾ ವಿರುದ್ಧ ಸೆಣಸಾಟ ನಡೆಸಲಿದ್ದಾರೆ.

ಕಾಂಗ್ರೆಸ್ ಶುಕ್ರವಾರ 32 ಅಭ್ಯರ್ಥಿಗಳನ್ನು ಪ್ರಕಟಿಸಿತ್ತು. ಜುಲಾನಾ ಕ್ಷೇತ್ರದಿಂದ ಕುಸ್ತಿಪಟು ವಿನೇಶ್ ಫೋಗಟ್‌ರನ್ನು ಕಣಕಿಳಿಸಲಾಗಿದೆ.

ಹರಿಯಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮತ್ತು ಎಎಪಿ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಿದ್ದು, ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಎಎಪಿ ಒಪ್ಪಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್–ಎಎಪಿ ಮೈತ್ರಿ ಹಾಗೂ ಸೀಟು ಹಂಚಿಕೆ ಬಗ್ಗೆ ಇಂದು (ಸೋಮವಾರ) ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಎಎಪಿ ಪಕ್ಷದ ಮೂಲಗಳು ಹೇಳಿವೆ.

ಇತ್ತ ಬಿಜೆಪಿ ಕೂಡ 67 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಹರಿಯಾಣ ವಿಧಾನಸಭೆಯ 90 ಸ್ಥಾನಗಳಿಗೆ ಅಕ್ಟೋಬರ್ 5ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಸೆಪ್ಟೆಂಬರ್ 12 ಕೊನೆಯ ದಿನವಾಗಿದೆ. ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.
.ಹರಿಯಾಣ | ಕಾಂಗ್ರೆಸ್–ಎಎಪಿ ಸೀಟು ಹಂಚಿಕೆ ಅಂತಿಮ?.ಹರಿಯಾಣ ಚುನಾವಣೆ: ವಿನೇಶ್ ಫೋಗಟ್ ಜುಲಾನಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.