ನವದೆಹಲಿ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಳ್ ಬುಚ್ ಅವರು ವಿನೋದ್ ಅದಾನಿ ನಿಯಂತ್ರಣದ ನಿಧಿಯೊಂದರಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯು ಮಾಡಿರುವ ಆರೋಪಗಳನ್ನು ದಾಖಲಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.

ವಿನೋದ್ ಅವರು ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರ ಸಹೋದರ. ‘ಆರೋಪಗಳು ಆಧಾರರಹಿತ ಎಂದು ಮಾಧವಿ ಅವರು ಸ್ಪಷ್ಟನೆ ನೀಡಿದ್ದರೂ, ಮೂರನೆಯ ವ್ಯಕ್ತಿಗಳು ಸಿದ್ಧಪಡಿಸುವ ವರದಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಈ ನ್ಯಾಯಾಲಯ ಹೇಳಿದ್ದರೂ, ಸಾರ್ವಜನಿಕರು ಮತ್ತು ಹೂಡಿಕೆದಾರರ ಮನಸ್ಸಿನಲ್ಲಿ ಅನುಮಾನಗಳು ಮೂಡಿವೆ. ಇಂತಹ ಸಂದರ್ಭದಲ್ಲಿ, ಬಾಕಿ ಇರುವ ತನಿಖೆಗಳನ್ನು ಪೂರ್ಣಗೊಳಿಸುವುದು ಸೆಬಿ ಪಾಲಿಗೆ ಅನಿವಾರ್ಯವಾಗುತ್ತದೆ’ ಎಂದು ವಕೀಲ ವಿಶಾಲ್ ತಿವಾರಿ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.