ನವದೆಹಲಿ: ದೇಶದಲ್ಲಿ ಹಿಂದೂ ಪ್ರಾಬಲ್ಯ ಅಚಲವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಯಾವುದೇ ಜನಸಂಖ್ಯಾ ನಿಯಂತ್ರಣ ನೀತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಶುಕ್ರವಾರ ಹೇಳಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿಎಚ್ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ, ಒಂದು ಕುಟುಂಬದಲ್ಲಿ ಕೇವಲ ಒಂದು ಮಗು ಮಾತ್ರ ಇದ್ದರೆ ಹಿಂದೂಗಳ ಜನಸಂಖ್ಯೆಯು ಹಿಂದೂಗಳಿಂದಲೇ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಉ.ಪ್ರ ಬಿಜೆಪಿ ಕಾರ್ಯಕಾರಿಣಿ: ರೈತ ಹೋರಾಟ, ಮತಾಂತರ, ಜಿಹಾದ್ ಕುರಿತು ಚರ್ಚೆ

'ನಾವು ಜನಸಂಖ್ಯಾ ನಿಯಂತ್ರಣದ ಬಗ್ಗೆ ಚರ್ಚಿಸುವಾಗ, ದೇಶದಲ್ಲಿ ಹಿಂದೂ ಸಮಾಜದ ಪ್ರಾಬಲ್ಯವು ಅಚಲವಾಗಿರಬೇಕು. ಹಿಂದೂಗಳಿಂದ ದೇಶದಲ್ಲಿ ರಾಜಕೀಯ, ಜಾತ್ಯತೀತತೆ, ಸಹಿಷ್ಣುತೆ
ಸೇರಿದಂತೆ ಎಲ್ಲ ತತ್ವಗಳನ್ನು ಪಾಲಿಸಲಾಗುತ್ತಿದೆ' ಎಂದು ಹೇಳಿದರು.

ಅದೇ ಹೊತ್ತಿಗೆ ದೇಶದಲ್ಲಿ ಹಿಂದೂಗಳಪ್ರಾಬಲ್ಯವನ್ನು ಖಚಿತಪಡಿಸಬೇಕಿದೆ ಎಂದವರು ಪ್ರತಿಪಾದಿಸಿದರು.

'ಹಿಂದೂ ಕುಟುಂಬದಲ್ಲಿ ಕನಿಷ್ಠ ಇಬ್ಬರು ಮಕ್ಕಳು ಇರಬೇಕು ಎಂಬುದನ್ನು ಯೋಚಿಸಲೇಬೇಕು. ಏಕೆಂದರೆ ಒಂದು ಕುಟುಂಬದಲ್ಲಿ ಒಂದು ಮಗು ಮಾತ್ರ ಇದ್ದರೆ, ಹಿಂದೂಗಳ ಜನಸಂಖ್ಯೆಯು ಹಿಂದೂಗಳಿಂದಲೇ ಕಡಿಮೆಯಾಗುತ್ತದೆ' ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್ನ ಆಡಳಿತ ಮತ್ತು ಟ್ರಸ್ಟಿಗಳ ಎರಡು ದಿನಗಳ ಸಭೆಯು ಶನಿವಾರದಿಂದ ಫರಿದಾಬಾದ್ನಲ್ಲಿ ನಡೆಯಲಿದೆ. ಈ ವೇಳೆಗೆ ನೂತನ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳ ಆಯ್ಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.