ನವದೆಹಲಿ: ಭವಿಷ್ಯದಲ್ಲಿ ಕಣಿವೆ ರಾಜ್ಯದಿಂದ ಕಾಶ್ಮೀರಿ ಪಂಡಿತರ ಸ್ಥಳಾಂತರ ಇರುವುದಿಲ್ಲ ಎಂಬ ವಿಶ್ವಾಸ ಹೊಂದಿರುವುದಾಗಿ ಆರ್ಎಸ್ಎಸ್ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಬುಧವಾರ ಹೇಳಿದರು.

ಅಲ್ಲದೇ, ಈಗಾಗಲೇ ಕಾಶ್ಮೀರವನ್ನು ತೊರೆದಿರುವ ಪಂಡಿತರ ಪುನರ್ವಸತಿ ಕಾರ್ಯವೂ ತ್ವರಿತವಾಗಿ ನಡೆಯಲಿದೆ ಎಂಬ ವಿಶ್ವಾಸವೂ ಇದೆ ಎಂದರು.

ಜಮ್ಮು ಮೂಲದ ಸಂಜೀವಿನಿ ಶಾರದಾ ಕೇಂದ್ರವು ‘ಕಾಶ್ಮೀರಿ ಪಂಡಿತರು ಮರಳಿ ಕಣಿವೆ ರಾಜ್ಯಕ್ಕೆ’ ಎಂಬ ವಿಷಯ ಕುರಿತು ಏರ್ಪಡಿಸಿದ್ದ ಸಂವಾದದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾಶ್ಮೀರಿ ಪಂಡಿತರು ತಮ್ಮ ಹೊಸ ವರ್ಷವಾದ ನವರೇಹ್ವನ್ನು ಮುಂದಿನ ವರ್ಷ ಕಾಶ್ಮೀರದಲ್ಲಿಯೇ ಆಚರಿಸುವಂತಾಗಲಿ ಎಂದು ಆಶಿಸುವೆ’ ಎಂದು ಹೊಸಬಾಳೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.