ಹೈದರಾಬಾದ್: 2007ರಲ್ಲಿ ಇಲ್ಲಿನ ಗೋಕುಲ್ ಚಾಟ್ ಮತ್ತು ಲುಂಬಿನಿ ಉದ್ಯಾನದ ಬಳಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ದೋಷಿಗಳು ಎಂದು ಸ್ಥಳೀಯ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

ಅನೀಕ್ ಶಫೀಕ್ ಸೈಯದ್ ಮತ್ತು ಮೊಹಮ್ಮದ್ ಅಕ್ಬರ್ ಇಸ್ಮಾಯಿಲ್ ಚೌಧರಿ ಶಿಕ್ಷೆಗೊಳಗಾದವರು. ಇನ್ನಿಬ್ಬರು ಆರೋಪಿಗಳು ದೋಷಮುಕ್ತರಾಗಿದ್ದಾರೆ. ಐದನೇ ಆರೋಪಿ ತಾರಿಕ್ ಅಂಜುಮ್ಕುರಿತ ತೀರ್ಪು ಮತ್ತು ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಇದೇ 10ಕ್ಕೆಪ್ರಕಟಿಸಲಿದೆ.

ತೆಲಂಗಾಣ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗದವರುತನಿಖೆ ನಡೆಸಿದ್ದು ಐವರು ಆರೋಪಿಗಳನ್ನು ಬಂಧಿಸಿತ್ತು.ಇಂಡಿಯನ್ ಮುಜಾಹಿದ್ದೀನ್ ಜೊತೆಗೆ ಒಡನಾಟ ಇರುವ ಕುರಿತು ದೂರಿನಲ್ಲಿ ಉಲ್ಲೇಖಿಸಿತ್ತು. ಅವರ ವಿರುದ್ಧ ನಾಲ್ಕು ಆರೋಪ ಪಟ್ಟಿಯನ್ನು ಸಲ್ಲಿಸಿತ್ತು. ತಲೆಮರೆಸಿಕೊಂಡಿರುವ ರಿಯಾಜ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್ ವಿರುದ್ಧವೂ ಆರೋಪ ದಾಖಲಿಸಲಾಗಿತ್ತು.

ಪ್ರಕರಣದಲ್ಲಿ ಆರೋಪಿಗಳಾಗಿರುವವರವಿಚಾರಣೆಯನ್ನು ನಾಂಪಲ್ಲಿ ನ್ಯಾಯಾಲಯ ಸಮುಚ್ಚಯದಿಂದ ಚೆರ್ಲಪಲ್ಲಿ ಕೇಂದ್ರೀಯ ಕಾರಾಗೃಹದ ಆವರಣದಲ್ಲಿರುವ ನ್ಯಾಯಾಲಯಕ್ಕೆ ಜೂನ್ ತಿಂಗಳಲ್ಲಿ ಸ್ಥಳಾಂತರಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ 2013ರಲ್ಲಿ ಮೆಟ್ರೊಪೊಲಿಟನ್ ಸೆಷನ್ಸ್ ನ್ಯಾಯಾಲಯವು ಇಂಡಿಯನ್ ಮುಜಾಹಿದ್ದೀನ್ ಕಾರ್ಯಕರ್ತರೆನ್ನಲಾದ ಅನೀಖ್ ಶಫೀಕ್ ಸಯ್ಯದ್, ಮೊಹಮ್ಮದ್ ಸಾದೀಕ್, ಅಕ್ಬರ್ ಇಸ್ಮಾಯಿಲ್ ಚೌಧರಿ ಮತ್ತು ಅನ್ಸರ್ ಅಹಮ್ಮದ್ ಬಾದ್ಶಾ ಶೇಕ್ ವಿರುದ್ಧ ಆರೋಪ ಹೊರಿಸಿತ್ತು. ಈ ಆರೋಪಿಗಳನ್ನು ಚೆರ್ಲಪಲ್ಲಿ ಕೇಂದ್ರೀಯ ಕಾರಾಗೃಹದಲ್ಲಿ ಇರಿಸಲಾಗಿದೆ.ಈ ಪ್ರಕರಣ ತನಿಖೆ ವೇಳೆ160 ಸಾಕ್ಷಿಗಳನ್ನು ವಿಚಾರಣೆಗೆ ಮತ್ತು ಮರ ಪರಿಶೀಲನೆಗೆ ಒಳಪಡಿಸಲಾಗಿತ್ತು.

ಏನಿದು ಘಟನೆ?: 2007ರ ಆಗಸ್ಟ್ 25ರಂದು ಐದು ನಿಮಿಷದ ಅಂತರದಲ್ಲಿ ಹೈದರಾಬಾದ್ನ ಪ್ರಸಿದ್ಧ ಹೋಟೆಲ್ ಗೋಕುಲ್ ಚಾಟ್ ಹಾಗೂ ಲುಂಬಿನಿ ಉದ್ಯಾನದ ಬಳಿ ಬಾಂಬ್ ಸ್ಫೋಟವಾಗಿತ್ತು.ಸ್ಫೋಟದ ಬಳಿಕ ನಗರದಲ್ಲಿ ಎರಡು ಬಾಂಬ್ಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಸ್ಫೋಟದಲ್ಲಿ 44 ಮಂದಿ ಮೃತಪಟ್ಟಿದ್ದರೆ, 68 ಮಂದಿ ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.