ನವದೆಹಲಿ: ನಾನು ಭ್ರಷ್ಟನಲ್ಲ, ದೆಹಲಿ ಜನರಿಗಾಗಿ ಎಎಪಿ ಸರ್ಕಾರ ಮಾಡುತ್ತಿದ್ದ ಉತ್ತಮ ಕೆಲಸವನ್ನು ಸಹಿಸದ ಬಿಜೆಪಿ, ನನ್ನನ್ನು ಜೈಲಿಗೆ ಕಳುಹಿಸಿತು ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಬುಧವಾರ ಆರೋಪಿಸಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆ 'ಜನ ಸಂಪರ್ಕ' ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ಪ್ರಕರಣಗಳಲ್ಲಿ ನಾಯಕರ ಬಂಧನದ ಹಿಂದಿನ ಸತ್ಯವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಅಭಿಯಾನ ಆರಂಭಗೊಂಡಿದೆ ಎಂದು ತಿಳಿಸಿದ್ದಾರೆ.
.ಜಮ್ಮು-ಕಾಶ್ಮೀರದ ಪ್ರಗತಿಗಾಗಿ ಒಮರ್ ಜತೆಗೂಡಿ ಕೆಲಸ: ಪ್ರಧಾನಿ ಮೋದಿ.ಭಾರಿ ಮಳೆ | ಬೆಂಗಳೂರು-ಚೆನ್ನೈ ಹಲವು ರೈಲುಗಳು ರದ್ದು: ಇಲ್ಲಿದೆ ಸಂಪೂರ್ಣ ಮಾಹಿತಿ.
ಎಎಪಿ ಕಾರ್ಯಕರ್ತರು ಈ ಅಭಿಯಾನದ ಪತ್ರಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವ ಮೂಲಕ ಜನರಿಗೆ ಸತ್ಯವನ್ನು ತಿಳಿಸಲು ಬಯಸುತ್ತೇವೆ. ದೆಹಲಿ ಜನರಿಗೆ ಉತ್ತಮ ಸೌಲಭ್ಯಗಳು ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ಕಂಡು ಕೇಂದ್ರ ಬಿಜೆಪಿ ಸರ್ಕಾರ ಷಡ್ಯಂತ್ರ ರೂಪಿಸಿ ನನ್ನನ್ನು ಐದು ತಿಂಗಳು ಜೈಲಿಗೆ ಕಳುಹಿಸಿತು ಎಂದು ವಾಗ್ದಾಳಿ ನಡೆಸಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿದ್ದ ಕೇಜ್ರಿವಾಲ್ ಅವರು ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಎಎಪಿ ಶಾಸಕರ ಸಭೆ ಬಳಿಕ ಆತಿಶಿ ಅವರನ್ನು ದೆಹಲಿ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
.J & K | ಪ್ರಜಾಪ್ರಭುತ್ವ ಬಲಪಡಿಸುವತ್ತ ಹೋರಾಟ ಮುಂದುವರಿಯಲಿದೆ: ಖರ್ಗೆ.ಜಮ್ಮು-ಕಾಶ್ಮೀರ | ಶೀಘ್ರದಲ್ಲೇ ರಾಜ್ಯ ಸ್ಥಾನಮಾನ ಮರುಸ್ಥಾಪನೆ: ಒಮರ್ ಅಬ್ದುಲ್ಲಾ.ಮೈಸೂರಿನಿಂದ ಎಚ್ಡಿಕೆ ಕ್ಷೇತ್ರಕ್ಕೆ ಗೂಡ್ಸ್ ಯಾರ್ಡ್ ಶಿಫ್ಟ್!.ವಿರೋಧ ಪಕ್ಷಗಳು ರಾಜ್ಯದ ಮಾನ ತೆಗೆಯುವುದನ್ನು ನಿಲ್ಲಿಸಲಿ: ಡಿ.ಕೆ. ಶಿವಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.