ವಯನಾಡ್ (ಕೇರಳ): ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬುಧವಾರ ನಾಮಪತ್ರ ಸಲ್ಲಿಸುವ ಮೂಲಕ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

ನಾಮಪತ್ರ ಸಲ್ಲಿಸುವ ಮೊದಲು ಕಲ್ಪೆಟ್ಟಾದಲ್ಲಿ ಆಯೋಜಿಸಿದ್ದ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾನು 17ನೇ ವಯಸ್ಸಿನಲ್ಲಿದ್ದಾಗ ನಮ್ಮ ತಂದೆ ದಿವಂಗತ ರಾಜೀವ್ ಗಾಂಧಿ ಪರವಾಗಿ 1989ರಲ್ಲಿ ಮೊದಲ ಬಾರಿಗೆ ಚುನಾವಣಾ ಪ್ರಚಾರ ನಡೆಸಿದ್ದೆ. ನನಗೆ 35 ವರ್ಷಗಳ ರಾಜಕಾರಣದ ಅನುಭವವಿದೆ’ ಎಂದು ಹೇಳಿದರು.

ಅಂದಿನಿಂದ ಇಲ್ಲಿಯವರೆಗೆ ನಾನು, ತಾಯಿ ಸೋನಿಯಾ ಗಾಂಧಿ, ಸಹೋದರ ರಾಹುಲ್ ಗಾಂಧಿ ಮತ್ತು ಪಕ್ಷದ ಇತರ ಸಹೋದ್ಯೋಗಿಗಳ ಪರ ಪ್ರಚಾರ ನಡೆಸಿದ್ದೇನೆ ಎಂದರು.

ವಯನಾಡ್ ಲೋಕಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ ಅವರು ತಾನು ಪ್ರಿಯಾಂಕಾ ಅವರಿಗಿಂತ ಜನರನ್ನು ಪ್ರತಿನಿಧಿಸುವಲ್ಲಿ ಹೆಚ್ಚು ಅನುಭವಿ ಎಂದು ಹೇಳಿಕೆ ನೀಡಿದ ಮರುದಿನವೇ ಪ್ರಿಯಾಂಕಾ ಅವರಿಂದ ಈ ಹೇಳಿಕೆ ಬಂದಿದೆ.

ವಯನಾಡ್ ಜನರನ್ನು ಪ್ರತಿನಿಧಿಸಲು ಪಕ್ಷವು ತನ್ನನ್ನು ಆಯ್ಕೆ ಮಾಡಿರುವುದು ನನಗೆ ಸಿಕ್ಕ ಗೌರವವೆಂದು ಭಾವಿಸುವೆ. ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದಾಗ ವಯನಾಡ್ನ ಜನರು ತೋರಿದ ಧೈರ್ಯವು ನನ್ನನ್ನು ಗಾಢವಾಗಿ ತಟ್ಟಿದೆ ಎಂದು ಹೇಳಿದರು.

ಪ್ರಿಯಾಂಕಾ ಭಾಷಣದ ವೇಳೆ ವೇದಿಕೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಇನ್ನಿತರ ಹಿರಿಯ ನಾಯಕರು ಇದ್ದರು.

ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಪ್ರಿಯಾಂಕಾ ಅವರು ಕೇವಲ ನಾಮಪತ್ರ ಸಲ್ಲಿಸಲು ಮಾತ್ರ ವಯನಾಡ್ನಲ್ಲಿಲ್ಲ. ಗುಡ್ಡಗಾಡಿನ ಈ ಜಿಲ್ಲೆಯ ಜನರ ಪಾಲಿಗೆ ಅವಿಶ್ರಾಂತ ನಾಯಕಿಯಾಗಿದ್ದಾರೆ. ಪ್ರಿಯಾಂಕಾ ಅವರಿಗೆ ಮತದಾರರು ಆಶೀರ್ವದಿಸಬೇಕು. ಅವರು ತಮ್ಮನ್ನು ಆಯ್ಕೆ ಮಾಡುವ ಜನರಿಗೆ ಖಂಡಿತವಾಗಿಯೂ ನ್ಯಾಯ ನೀಡಲಿದ್ದಾರೆ’ ಎಂದರು.

ಭಾಷಣ ಮುಗಿದ ನಂತರ, ಪ್ರಿಯಾಂಕಾ ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.