ನವದೆಹಲಿ: ಪಾಕಿಸ್ತಾನದ ವಶದಲ್ಲಿದ್ದಾಗ ಅವರು ದೈಹಿಕ ಹಿಂಸೆ ನೀಡಿರಲಿಲ್ಲ.ಆದರೆ ಸಿಕ್ಕಾಪಟ್ಟೆ ಮಾನಸಿಕ ಹಿಂಸೆ ನೀಡಿದ್ದರು ಎಂದು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಹೇಳಿರುವುದಾಗಿಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಮಿಗ್ 21 ವಿಮಾನದಲ್ಲಿಪಾಕಿಸ್ತಾನ ಎಫ್-16 ಫೈಟರ್ ವಿಮಾನವನ್ನು ಬೆನ್ನಟ್ಟಿ ಹೋಗಿ ಹೊಡೆದುರುಳಿಸಿ ವಿಮಾನಪತನಗೊಂಡು ಪಾಕ್ ನೆಲದ ಮೇಲೆ ಬಿದ್ದ ವಾಯುಪಡೆಯ ಪೈಲಟ್ ಅಭಿನಂದನ್‍ನ್ನು ಪಾಕ್ ಸೇನೆಬುಧವಾರ ವಶ ಪಡಿಸಿಕೊಂಡಿತ್ತು. ಸರಿ ಸುಮಾರು 58 ಗಂಟೆಗಳ ಕಾಲ ಪಾಕ್ ವಶದಲ್ಲಿದ್ದ ಅಭಿನಂದನ್ ಅವರನ್ನು ಶಾಂತಿಯ ಸಂಕೇತವಾಗಿ ಬಿಡುಗಡೆಗೊಳಿಸುವುದಾಗಿ ಪಾಕ್ ಸಂಸತ್ತಿನಲ್ಲಿ ಗುರುವಾರ ಇಮ್ರಾನ್ ಖಾನ್ ಘೋಷಿಸಿದ್ದರು. ಇದಾದ ನಂತರ ಶುಕ್ರವಾರ ರಾತ್ರಿ 9.20ಕ್ಕೆ ಅಭಿನಂದನ್‍ನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಿತ್ತು.

ಭಾರತಕ್ಕೆ ವಾಘಾ- ಅಟ್ಟಾರಿ ಗಡಿ ಮೂಲಕ ಪ್ರವೇಶಿಸಿದ ಅಭಿನಂದನ್‍ನ್ನು ವೈದ್ಯಕೀಯ ಪರೀಕ್ಷೆಗಾಗಿ ದೆಹಲಿಗೆ ಕರೆದೊಯ್ಯಲಾಗಿದೆ. ನವದೆಹಲಿಯ ಸುಬ್ರತೋ ಪಾರ್ಕ್ ನಲ್ಲಿರುವ ವಾಯುಪಡೆಯ ವೈದ್ಯಕೀಯ ಕೇಂದ್ರದಲ್ಲಿ ಇವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.