ನವದೆಹಲಿ: ಕೋವಿಡ್ 19 ಸೋಂಕು ಪತ್ತೆಗಾಗಿ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಅನ್ನು ಮನೆಯಲ್ಲೇ ಮಾಡುವುದಕ್ಕೆ ಹೋಮ್ ಟೆಸ್ಟಿಂಗ್ ಕಿಟ್ ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಬುಧವಾರ ಅನುಮೋದನೆ ನೀಡಿದೆ.

ಪ್ರಯೋಗಾಲಯದಲ್ಲಿ ದೃಢಪಟ್ಟ ಕೋವಿಡ್ 19 ಪಾಸಿಟಿವ್ ರೋಗಿಗಳ ಜತೆ ನಿಕಟ ಸಂಪರ್ಕದಲ್ಲಿದ್ದವರು ಮನೆಯಲ್ಲಿಯೇ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಅನ್ನು ಟೆಸ್ಟಿಂಗ್ ಕಿಟ್ ಬಳಸಿ ಮಾಡಬಹುದು.

ಅದರಲ್ಲಿ ಪಾಸಿಟಿವ್ ಕಂಡುಬಂದರೆ ಮತ್ತೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿಲ್ಲ. ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಅನ್ನೇ ಅಧಿಕೃತವಾಗಿ ಪರಿಗಣಿಸಬಹುದು ಎಂದು ಐಸಿಎಂಆರ್ ಹೇಳಿದೆ.

ಈ ಬಗ್ಗೆ ಮಂಡಳಿ ಅಧಿಕೃತ ಸೂಚನೆ ಹೊರಡಿಸಿದ್ದು, ಕೋವಿಡ್ 19 ರೋಗಲಕ್ಷಣಗಳಿದ್ದೂ, ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್‌ನಲ್ಲಿ ಫಲಿತಾಂಶ ನೆಗೆಟಿವ್ ಎಂದು ಕಂಡುಬಂದರೆ ಅವರು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕು, ಕೆಲವೊಮ್ಮೆ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್‌ನಲ್ಲಿ ಪಾಸಿಟಿವ್ ಪ್ರಕರಣಗಳನ್ನು ಪತ್ತೆಹಚ್ಚಲಾಗುವುದಿಲ್ಲ ಎಂದು ಹೇಳಿದೆ.

ಆಸ್ಪತ್ರೆ ಆವರಣದಲ್ಲೇ ಸಿಗಲಿದೆ ಆಮ್ಲಜನಕ: ಯೋಜನೆ ರೂಪಿಸಿದ ಸರ್ಕಾರಿ ವೈದ್ಯ

ಜತೆಗೆ ನೆಗೆಟಿವ್ ಫಲಿತಾಂಶ ಬಂದಿರುವವರನ್ನು ಶಂಕಿತ ಕೋವಿಡ್ ರೋಗಿಗಳೆಂದು ಪರಿಗಣಿಸಿ, ಆರೋಗ್ಯ ಸಚಿವಾಲಯದ ನಿಯಮಗಳನ್ನು ಪಾಲಿಸುವುದು ಸೂಕ್ತವಾಗುತ್ತದೆ ಎಂದು ಮಂಡಳಿ ತಿಳಿಸಿದ್ದು, ಅಧಿಕೃತ ಮತ್ತು ಸೂಕ್ತ ಬಳಕೆದಾರರ ಕೈಪಿಡಿ ಸಹಿತ ಲಭ್ಯವಿರುವ ಹೋಮ್ ಟೆಸ್ಟಿಂಗ್ ಕಿಟ್ ಅನ್ನು ಬಳಸಲಷ್ಟೇ ಅನುಮತಿ ನೀಡಿದೆ. ಅಲ್ಲದೆ, ಕಿಟ್‌ನಲ್ಲಿ ಹೇಳಿರುವ ಪ್ರಕ್ರಿಯೆ ಅನುಸಾರ ಟೆಸ್ಟ್ ಮಾಡಬೇಕು ಎಂದು ಸೂಚನೆ ನೀಡಿದೆ.

ವೈರಾಣು, ಬ್ಯಾಕ್ಟೀರಿಯಾ ಪ್ರತ್ಯೇಕಿಸುವ ತಂತ್ರಜ್ಞಾನ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.