ಕೊಯಮತ್ತೂರು: ಭಾರತೀಯ ಸೀರೆಗಳಿಗೆ ಸಮಕಾಲೀನ ವಿನ್ಯಾಸದ ಸ್ಪರ್ಶ ನೀಡುವಲ್ಲಿ ಹೆಸರುವಾಸಿಯಾದ ವಸ್ತ್ರವಿನ್ಯಾಸಕ ಸತ್ಯ ಪೌಲ್ (79) ನಿಧನ ಹೊಂದಿದ್ದಾರೆ ಎಂದು ಅವರ ಪುತ್ರ ಪುನೀತ್ ನಂದಾ ತಿಳಿಸಿದ್ದಾರೆ.

ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಪೌಲ್ ಅವರು, ಸದ್ಗುರು ಅವರ ಈಶಾ ಯೋಗ ಕೇಂದ್ರದಲ್ಲಿ ಬುಧವಾರ ಕೊನೆಯುಸಿರೆಳೆದರು.

ಡಿಸೆಂಬರ್ 2ರಂದು ಪಾರ್ಶ್ವವಾಯುವಿಗೆ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು ಎಂದು ನಂದಾ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಈಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಅವರು ‘ಸತ್ಯ ಪೌಲ್, ನೀವು ಅಗಾಧ ಉತ್ಸಾಹಿ. ಅರ್ಥಪೂರ್ಣವಾಗಿ ಬದುಕಿದಿರಿ. ಭಾರತೀಯ ವಸ್ತ್ರ ವಿನ್ಯಾಸ ಕ್ಷೇತ್ರಕ್ಕೆ ವಿಶಿಷ್ಟ ದೃಷ್ಟಿಕೋನವನ್ನು ತಂದುಕೊಟ್ಟಿರಿ. ನಿಮ್ಮೊಂದಿಗಿದ್ದದ್ದೇ ನನ್ನ ಭಾಗ್ಯ‘ ಎಂದು ಟ್ವೀಟ್ ಮಾಡಿದ್ದಾರೆ.

ಪೌಲ್ ಅವರು 60ರ ದಶಕದಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ತಮ್ಮ ಉದ್ಯಮದ ಪಯಣ ಆರಂಭಿಸಿದರು. ನಂತರ ಭಾರತೀಯ ಕೈಮಗ್ಗ ಉತ್ಪನ್ನಗಳು ರಫ್ತಾಗುವಂತೆ ಉದ್ಯಮವನ್ನು ವಿಸ್ತರಿಸಿದರು. ಯುರೋಪ್ ಮತ್ತು ಅಮೆರಿಕದಲ್ಲಿ ಅತ್ಯುನ್ನತಮಟ್ಟದ ಮಳಿಗೆಗಳನ್ನು ಆರಂಭಸಿದರು. 1980ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ‘ಬೊಟಿಕ್ ಸೀರೆ‘ಯನ್ನು ಪರಿಚಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.