ರಾಂಚಿ: ಭೂಮಿ ಅಕ್ರಮ ಪರಭಾರೆ ಪ್ರಕರಣದಲ್ಲಿ ಬಂಧಿತರಾಗಿರುವ ಐಐಎಸ್ ಅಧಿಕಾರಿ ಛಾವಿ ರಂಜನ್ ಅವರನ್ನು ವಿಶೇಷ ಪಿಎಂಎಲ್‌ಎ ಕೋರ್ಟ್ ಶನಿವಾರ ಆರು ದಿನಗಳ ಕಾಲ ಜಾರಿ ನಿರ್ದೇಶನಾಲಯದ (ಇ.ಡಿ) ವಶಕ್ಕೆ ಒಪ್ಪಿಸಿತು.

10 ದಿನ ವಶಕ್ಕೆ ಒಪ್ಪಿಸುವಂತೆ ಇ.ಡಿ ಕೋರಿತ್ತು. 2011ನೇ ತಂಡದ ಐಎಎಸ್ ಅಧಿಕಾರಿಯಾದ ರಂಜನ್ ರಾಂಚಿಯಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ನಡೆದಿರುವ ಅಕ್ರಮಗಳ ಬಗ್ಗೆ ಇ.ಡಿ ತನಿಖೆ ನಡೆಸುತ್ತಿದೆ.

10 ಗಂಟೆ ಸತತ ವಿಚಾರಣೆಯ ಬಳಿಕ ಕಳೆದ ಗುರುವಾರ ರಂಜನ್ ಅವರನ್ನು ಬಂಧಿಸಿತ್ತು. ವಿಶೇಷ ಕೋರ್ಟ್ ಶುಕ್ರವಾರ ಅವರನ್ನು ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲು ಆದೇಶಿಸಿತ್ತು. ಪಿಎಂಎಲ್‌ಎ ಕಾಯ್ದೆಯಡಿ ರಂಜನ್ ಅವರ ಹೇಳಿಕೆಯನ್ನು ತನಿಖಾಧಿಕಾರಿ ದಾಖಲು ಮಾಡಿಕೊಂಡಿದ್ದರು.

ಇದಕ್ಕೂ ಮುನ್ನ ಇ.ಡಿ. ಅಧಿಕಾರಿಗಳು ರಂಜನ್ ಅವರ ನಿವಾಸ ಹಾಗೂ ಜಾರ್ಖಂಡ್, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಇನ್ನೂ ಕೆಲವರ ನಿವಾಸಗಳ ಮೇಲೆ ದಾಳಿ ನಡೆಸಿದ್ದರು. ದಾಳಿ ಬಳಿಕ ಜಾರ್ಖಂಡ್‌ನ ಸರ್ಕಾರಿ ಅಧಿಕಾರಿ ಸೇರಿದಂತೆ ಇನ್ನೂ ಹಲವರನ್ನು ಇ.ಡಿ ಅಧಿಕಾರಿಗಳು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.