ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು 'ಕಾಮಿಡಿಯನ್' ಎಂದು ಮಾಜಿ ಪತ್ನಿ ರೆಹಮ್ ಖಾನ್ ಟೀಕಿಸಿದ್ದಾರೆ.

'ಇಮ್ರಾನ್ ಪ್ರತಿಭಾನ್ವಿತ ಹಾಸ್ಯ ಕಲಾವಿದ. ಅವರಿಗೆ ಬಾಲಿವುಡ್ನಲ್ಲಿ ಅವಕಾಶ ನೀಡಬೇಕು. 'ದಿ ಕಪಿಲ್ ಶರ್ಮಾ ಶೋ' ಹಾಸ್ಯ ಕಾರ್ಯಕ್ರಮದಲ್ಲಿ ಖಾಲಿಯಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧುವಿನ ಸ್ಥಾನದಲ್ಲಿ ಇಮ್ರಾನ್ ಖಾನ್ ಅವರನ್ನು ಕೂರಿಸಬಹುದು' ಎಂದು ರೆಹಮ್ ಖಾನ್ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

'ಹೇಗೂ ಸಿಧು ಜೊತೆಗೆ ಇಮ್ರಾನ್ ಗೆಳೆತನವಿದೆ. ಅವರೀಗ ಕವಿತೆ ಬರೆಯುವುದನ್ನು ಶುರು ಹಚ್ಚಿಕೊಂಡಿದ್ದಾರೆ' ಎಂದು ರೆಹಮ್ ಖಾನ್ ವ್ಯಂಗ್ಯವಾಡಿದ್ದಾರೆ.'ಇಮ್ರಾನ್ ಖಾನ್ ಭ್ರಮೆಯಿಂದಿರುವ ವ್ಯಕ್ತಿ. ಸಲಹೆಗಳಿಗೆ ಕಿವಿ ಕೊಡುವುದಿಲ್ಲ. ನನ್ನ ಸಲಹೆಗಳನ್ನು ಕೇಳಿದ್ದಿದ್ದರೆ ಇಂದಿಗೂ ಅವರ ಪತ್ನಿಯಾಗಿರುತ್ತಿದ್ದೆ. ಅವರನ್ನು ಬಿಟ್ಟು ಹೋಗುತ್ತಿರಲಿಲ್ಲ' ಎಂದು ಇತ್ತೀಚೆಗೆ ಮಾಧ್ಯಮವೊಂದರಲ್ಲಿ ರೆಹಮ್ ಖಾನ್ ಹೇಳಿದ್ದರು.

ಇಮ್ರಾನ್ ಪದಚ್ಯುತಿಗೆ ಅಮೆರಿಕ ಷಡ್ಯಂತ್ರ: ಆರೋಪ ಖಂಡಿಸಿದ ಬೈಡನ್ ಆಡಳಿತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.