ನವದೆಹಲಿ: ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವ ಸಂತೋಷ ಸೂಚ್ಯಂಕ ವರದಿಯಲ್ಲಿ ಭಾರತ 136ನೇ ಸ್ಥಾನದಲ್ಲಿದೆ. ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ದೇಶವು ಶೀಘ್ರದಲ್ಲೇ 'ದ್ವೇಷ' ಮತ್ತು 'ಕೋಪ'ದ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಬಹುದು ಎಂದಿದ್ದಾರೆ.

'ಭಾರತದ ಹಸಿವು ಸೂಚ್ಯಂಕ: 101, ಸ್ವಾತಂತ್ರ್ಯ ಸೂಚ್ಯಂಕ: 119, ಸಂತೋಷ ಸೂಚ್ಯಂಕ: 136 ಆಗಿದೆ. ಆದರೆ, ನಾವು ಶೀಘ್ರದಲ್ಲೇ ದ್ವೇಷ ಮತ್ತು ಕೋಪದ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುತ್ತೇವೆ!' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ವಿಶ್ವಸಂಸ್ಥೆ ಬಿಡುಗಡೆ ಮಾಡಿದ ವಿಶ್ವ ಸಂತೋಷ ಸೂಚ್ಯಂಕ ವರದಿಯ (2022) ಚಿತ್ರವನ್ನು ಹಂಚಿಕೊಂಡಿದ್ದಾರೆ.

ಈ ವರ್ಷ ವಿಶ್ವ ಸಂತೋಷ ಸೂಚ್ಯಂಕ ವರದಿಯ 10 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಇದು ವಿಶ್ವದಾದ್ಯಂತ 150 ಕ್ಕೂ ಹೆಚ್ಚು ದೇಶಗಳಲ್ಲಿ ಜನರ ಆದಾಯ, ಭ್ರಷ್ಟಾಚಾರದ ಮಟ್ಟ, ವೈಯಕ್ತಿಕ ಸ್ವಾತಂತ್ರ್ಯ, ಆರೋಗ್ಯಕರ ಜೀವನ, ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ), ಸಾಮಾಜಿಕ ಬೆಂಬಲ ಮುಂತಾದ ಅಂಶಗಳನ್ನು ಪರಿಗಣಿಸಿ ಈ ಸೂಚ್ಯಂಕ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಜನರ ಬದುಕಿನ ಮೇಲೆ ಆಗಿರುವ ಪರಿಣಾಮ, ಮಾನಸಿಕ ಸ್ಥಿತಿಯನ್ನು ಪರಿಗಣಿಸಲಾಗಿದೆ. ಇದಕ್ಕಾಗಿ ಜಾಗತಿಕವಾಗಿ ಸಮೀಕ್ಷೆ ನಡೆಸಲಾಗುತ್ತದೆ.

ವರದಿಯ ಪ್ರಕಾರ, ಭಾರತ ಈ ವರ್ಷ ಮೂರು ಸ್ಥಾನಗಳಿಂದ ಮೇಲಕ್ಕೇರಿದ್ದು, ಸದ್ಯ 136ನೇ ಸ್ಥಾನದಲ್ಲಿದೆ.

ಇದನ್ನೂ ಓದಿ:ವಿಶ್ವದ ಅತ್ಯಂತ ಸಂತೋಷ ಭರಿತ ರಾಷ್ಟ್ರ ಫಿನ್ಲೆಂಡ್

ಸತತವಾಗಿ ಐದನೇ ಬಾರಿಯೂ ಫಿನ್ಲೆಂಡ್ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ಡೆನ್ಮಾರ್ಕ್ ಎರಡನೇ ಸ್ಥಾನದಲ್ಲಿದೆ. ನಂತರದಲ್ಲಿ ಐಸ್ಲ್ಯಾಂಡ್, ಸ್ವಿಟ್ಜರ್ಲೆಂಡ್ ಮತ್ತು ನೆದರ್ಲೆಂಡ್ ಸ್ಥಾನ ಪಡೆದಿವೆ. ಅಫ್ಗಾನಿಸ್ತಾನ ಅತೃಪ್ತಿಕರ ರಾಷ್ಟ್ರವೆಂದು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.