ಅಟಾರಿ–ವಾಘಾ: ಭಾರತದ ಗಡಿ ಭದ್ರತಾ ಪಡೆ(ಬಿಎಸ್ಎಫ್) ಮತ್ತು ಪಾಕಿಸ್ತಾನದ ರೇಂಜರ್ಸ್ ದೀಪಾವಳಿ ಪ್ರಯುಕ್ತ ಬುಧವಾರ ಪಂಜಾಬ್ ವಾಘಾ ಗಡಿಯಲ್ಲಿ ಸಿಹಿ ತಿನಿಸಿ ವಿನಿಮಯ ಮಾಡಿಕೊಂಡರು.

ಸೌಹಾರ್ದಯತೆಯ ಪ್ರತೀಕವಾಗಿ ಉಭಯ ರಾಷ್ಟ್ರಗಳ ಗಡಿ ಭದ್ರತಾ ಪಡೆಗಳು ರಾಷ್ಟ್ರೀಯ ಮತ್ತು ಧಾರ್ಮಿಕ ಹಬ್ಬಗಳ ಸಂದರ್ಭಗಳಲ್ಲಿ ಸಿಹಿ ವಿನಿಮಯ ಮಾಡಿಕೊಳ್ಳುತ್ತವೆ. ಗಡಿ ವಲಯಗಳಲ್ಲಿ ಆತಂಕ ಸ್ಥಿತಿ ಇದ್ದರೂ ಗಣರಾಜ್ಯ ದಿನ, ಸ್ವಾತಂತ್ರೋತ್ಸವ, ಈದ್ ಹಾಗೂ ದೀಪಾವಳಿಯಲ್ಲಿ ಸಿಹಿ ವಿನಿಮಯ ನಡೆಯುತ್ತದೆ.

ಗಡಿ ಭಾಗದಲ್ಲಿ ಅಪ್ರಚೋದಿತ ದಾಳಿ ನಡೆದಿದ್ದರಿಂದ ಈ ಬಾರಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಶುಭಾಶಯ ಹಾಗೂ ಸಿಹಿ ವಿನಿಮಯ ಆಗಿರಲಿಲ್ಲ. 2016ರಲ್ಲಿ ಉರಿ ವಲಯದಲ್ಲಿ ಭಾರತೀಯ ಸೇನಾ ಶಿಬಿರದ ಮೇಲೆ ದಾಳಿ ನಡೆದಾಗಲೂ ಈ ಸಂಪ್ರದಾಯಕ್ಕೆ ಅಡ್ಡಿ ಉಂಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.