ನವದೆಹಲಿ(ಪಿಟಿಐ): 125 ದೇಶಗಳಿಗೆ ಸಂಬಂಧಿಸಿದ ಪ್ರಸಕ್ತ ಸಾಲಿನ ಜಾಗತಿಕ ಹಸಿವು ಸೂಚ್ಯಂಕ ವಿವರಗಳನ್ನು ಗುರುವಾರ ಬಿಡುಗಡೆ ಮಾಡಲಾಗಿದ್ದು, ಭಾರತವು 111ನೇ ಸ್ಥಾನಕ್ಕೆ ಕುಸಿದಿದೆ.

ಜಾಗತಿಕ ಹಸಿವು ಸೂಚ್ಯಂಕ–2023ಕ್ಕೆ ಸಂಬಂಧಿಸಿ, ಭಾರತದ ಅಂಕ ಶೇ 28.7ರಷ್ಟಿದೆ. ಇದು ಹಸಿವಿನ ಮಟ್ಟ ಗಂಭೀರವಾಗಿರುವುದನ್ನು ತೋರಿಸುತ್ತದೆ ಎಂಧು ಸೂಚ್ಯಂಕವನ್ನು ಆಧರಿಸಿ ಬಿಡುಗಡೆ ಮಾಡಿರುವ ವರದಿಯಲ್ಲಿ ವಿವರಿಸಲಾಗಿದೆ.

ಕಳೆದ ವರ್ಷ 121 ರಾಷ್ಟ್ರಗಳ ಪೈಕಿ ಭಾರತವು 107ನೇ ಸ್ಥಾನದಲ್ಲಿತ್ತು.

‘ಜಾಗತಿಕ ಹಸಿವು ಸೂಚ್ಯಂಕ’(ಜಿಎಚ್ಐ) ಎಂಬುದು ಪ್ರಾದೇಶಿಕ, ರಾಷ್ಟ್ರೀಯ ಹಾಗೂ ಜಾಗತಿಕ ಮಟ್ಟದಲ್ಲಿ ಹಸಿವಿನ ಪ್ರಮಾಣವನ್ನು ಅಳೆಯುವ ಸಾಧನವಾಗಿದೆ.

ಭಾರತದ ನೆರೆಯ ರಾಷ್ಟ್ರಗಳು ಈ ವಿಷಯದಲ್ಲಿ ಉತ್ತಮ ಸ್ಥಿತಿಯಲ್ಲಿವೆ. ಪಾಕಿಸ್ತಾನ 102ನೇ ಸ್ಥಾನಲ್ಲಿದ್ದರೆ, ಬಾಂಗ್ಲಾದೇಶ –81, ನೇಪಾಳ– 69 ಹಾಗೂ ಶ್ರೀಲಂಕಾ 60ನೇ ಸ್ಥಾನದಲ್ಲಿದೆ. ದಕ್ಷಿಣ ಏಷ್ಯಾ ಮತ್ತು ದಕ್ಷಿಣ ಆಫ್ರಿಕಾಕ್ಕೆ ಸಂಬಂಧಿಸಿ ಸೂಚ್ಯಂಕವು 27ರಷ್ಟಿದೆ. ಈ ಪ್ರದೇಶಗಳಲ್ಲಿ ಹಸಿವಿನ ಸಮಸ್ಯೆ ಗರಿಷ್ಠವಾಗಿದ್ದು, ಗಂಭೀರವೂ ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಮಕ್ಕಳು ತಮ್ಮ ಎತ್ತರಕ್ಕೆ ತಕ್ಕಷ್ಟು ತೂಕ ಹೊಂದಿಲ್ಲದಿರುವುದು ಕೂಡ ಅಪೌಷ್ಟಿಕತೆ ವ್ಯಾಪ್ತಿಗೆ ಬರುತ್ತದೆ. ಈ ಪ್ರಮಾಣವು ಭಾರತದಲ್ಲಿ ಶೇ 18.7ರಷ್ಟಿದೆ. ಇದು ಜಗತ್ತಿನಲ್ಲಿಯೇ ಗರಿಷ್ಠ ಮಟ್ಟದ್ದಾಗಿದೆ ಎಂದು ಸೂಚ್ಯಂಕ ಕುರಿತ ವರದಿಯಲ್ಲಿ ಹೇಳಲಾಗಿದೆ.

Highlights - ಶೇ 16.6 ಭಾರತದ ಮಕ್ಕಳಲ್ಲಿನ ಅಪೌಷ್ಟಿಕತೆ ಪ್ರಮಾಣ ಶೇ 3.1 5 ವರ್ಷ ಒಳಗಿನ ಮಕ್ಕಳ ಮರಣ ಪ್ರಮಾಣ ಶೇ 58.1 15–24 ವರ್ಷ ವಯೋಮಾನದ ಮಹಿಳೆಯರಲ್ಲಿನ ರಕ್ತಹೀನತೆ ಪ್ರಮಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.