ಬಾಲೇಶ್ವರ: ಸೀಮಿತ ವ್ಯಾಪ್ತಿಯ ಎರಡು ವಾಯು ಕ್ಷಿಪಣಿಗಳ ಪ್ರಯೋಗವನ್ನು ಒಡಿಶಾದ ತೀರ ಪ್ರದೇಶವಾದ ಚಾಂಡಿಪುರದಲ್ಲಿರುವ ಅಂತರ್ಗತ ಪರೀಕ್ಷಾ ವಲಯದಿಂದ ಯಶಸ್ವಿಯಾಗಿ ನಡೆಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಡಿಆರ್‌ಡಿಒ ಹಾಗೂ ನೌಕಾ ದಳದ ತಜ್ಞರು ಕ್ಷಿಪಣಿಗಳ ಪ್ರಯೋಗದಲ್ಲಿ ಪಾಲ್ಗೊಂಡರು.

ಈ ಕುರಿತು ಪ್ರಕಟಣೆ ಹೊರಡಿಸಿರುವ ಡಿಆರ್‌ಡಿಒ, ‘ಸೆ. 12 ಹಾಗೂ 13ರಂದು ಪರೀಕ್ಷೆ ನಡೆಸಲಾಯಿತು. ನೆಲದಿಂದ ಚಿಮ್ಮಿ ಆಕಾಶದಲ್ಲಿನ ಗುರಿಯನ್ನು ನಿಖರವಾಗಿ ನಾಶ ಮಾಡುವ ಕ್ಷಿಪಣಿಯ ಸಾಮರ್ಥ್ಯವನ್ನು ಈ ಪರೀಕ್ಷೆ ದೃಢಪಡಿಸಿತು’ ಎಂದು ತಿಳಿಸಿದೆ.

‘ಕಡಿಮೆ ಎತ್ತರದಲ್ಲಿ ಅತಿ ವೇಗದಲ್ಲಿ ಗುರಿಯನ್ನು ತಲುಪುವಲ್ಲಿ ಎರಡೂ ಕ್ಷಿಪಣಿಗಳು ಯಶಸ್ವಿಯಾಗಿವೆ. ಸುರಕ್ಷತಾ ದೃಷ್ಟಿಯಿಂದ, ಪರೀಕ್ಷಾ ವಲಯದಿಂದ 2.5 ಕಿ.ಮೀ. ಸುತ್ತಳತೆ ವ್ಯಾಪ್ತಿಯಲ್ಲಿರುವ ಆರು ಗ್ರಾಮಗಳ 3,100 ನಿವಾಸಿಗಳನ್ನು ಬಾಲೇಶ್ವರ ಜಿಲ್ಲಾಡಳಿತ ಸ್ಥಳಾಂತರಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.