ಬೆಂಗಳೂರು: ಭಾರತವು ಜಗತ್ತಿನಲ್ಲೇ ಮೂರನೇ ಅತ್ಯಂತ ಕಲುಷಿತ ರಾಷ್ಟ್ರ ಎಂಬ ಅಪಖ್ಯಾತಿಗೊಳಗಾಗಿದೆ. ಐಕ್ಯೂಏರ್ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶ ದಾಖಲಾಗಿದೆ.

98 ರಾಷ್ಟ್ರಗಳ ಗ್ರೌಂಡ್-ಲೆವೆಲ್ ಮಾನಿಟರಿಂಗ್ ಸ್ಟೇಷನ್‌ಗಳ ಮಾಹಿತಿಯ ಆಧಾರದಲ್ಲಿ ಕಲುಷಿತ ದೇಶ ಹಾಗೂ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎಂಬ ಅಪಖ್ಯಾತಿಗೊಳಗಾಗಿದೆ.

ಗ್ರೀನ್‌ಪೀಸ್, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ಹಾಗೂ ಇತರ ಏಜೆನ್ಸಿಗಳ ಬೆಂಬಲದೊಂದಿಗೆ ವಾರ್ಷಿಕ ವಿಶ್ವದ ವಾಯು ಗುಣಮಟ್ಟ ವರದಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ:ದೆಹಲಿ ಗರಿಷ್ಠ ವಾಯುಮಾಲಿನ್ಯವುಳ್ಳ ನಗರ: ವರದಿ

ಭಾರತದಲ್ಲಿ ಇದರ ಪ್ರಮಾಣ 51 ಮೈಕ್ರೋಗ್ರಾಂ ಆಗಿದ್ದು, ಮೊದಲೆರಡು ಸ್ಥಾನಗಳಲ್ಲಿರುವ ಬಾಂಗ್ಲಾದೇಶ (77.1) ಹಾಗೂ ಪಾಕಿಸ್ತಾನದಲ್ಲಿ (59) ರಷ್ಟಿದೆ.

2019ಕ್ಕೆ (58.1) ಹೋಲಿಸಿದರೆ ಭಾರತದಲ್ಲೂ ಮಾಲಿನ್ಯ ಮಟ್ಟ ಕಡಿಮೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಅಂತೆಯೇ, ಜಗತ್ತಿನಾದ್ಯಂತ ಹೆಚ್ಚು ಕಲುಷಿತವಾದ ರಾಜಧಾನಿಗಳ ಪೈಕಿ, ನವದೆಹಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಹಾಗಿದ್ದರೂ 2019ಕ್ಕೆ ಹೋಲಿಸಿದಾಗ (98.6) ಮೈಕ್ರೋಗ್ರಾಂ ಪ್ರಮಾಣವು 84.1ಕ್ಕೆ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.