ಗಾಂಧಿನಗರ: ದೇಶದಲ್ಲಿನ ಸಾಂಪ್ರದಾಯಿಕ ಔಷಧ ಉದ್ಯಮವನ್ನು ಉತ್ತೇಜಿಸಲು ಹಾಗೂ ಆಯುಷ್ ಉತ್ಪನ್ನಗಳ ಗುಣಮಟ್ಟವನ್ನು ದೃಢೀಕರಿಸುವುದಕ್ಕಾಗಿ ಶೀಘ್ರದಲ್ಲೇ ‘ಆಯುಷ್ ಮಾರ್ಕ್’ ಅನ್ನು ಪ್ರಾರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.

ಇಲ್ಲಿನ ಮಹಾತ್ಮ ಮಂದಿರದಲ್ಲಿ ಮೂರು ದಿನಗಳ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯನ್ನು ಮಾರಿಷಸ್ ಪ್ರಧಾನಿ ಪ್ರವಿಂದ್ ಜಗನ್ನಾಥ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೋಸ್ ಅಧನಾಮ್ ಗ್ಯಾಬ್ರಿಯೇಸಸ್ ಅವರ ಸಮ್ಮುಖದಲ್ಲಿ ಉದ್ಘಾಟಿಸಿದ ನಂತರ ಮೋದಿ ಮಾತನಾಡಿದರು.

‘ಹೀಲ್ ಇನ್ ಇಂಡಿಯಾ’ ಕುರಿತು ಮಾತನಾಡಿದ ಅವರು, ಆಯುಷ್ ಚಿಕಿತ್ಸೆಗಳನ್ನು ಪಡೆಯಲು ಭಾರತಕ್ಕೆ ಬರಲು ಬಯಸುವವರಿಗೆ ವಿಶೇಷ ‘ಆಯುಷ್ ವೀಸಾ’ ವ್ಯವಸ್ಥೆ ಮಾಡಲಾಗುವುದು ಎಂದೂ ಘೋಷಿಸಿದರು.

‘ಭಾರತವು ಶೀಘ್ರದಲ್ಲೇ ಆಯುಷ್ ಮಾರ್ಕ್ ಅನ್ನು ಪರಿಚಯಿಸಲಿದ್ದು, ಇದು ದೇಶದ ಗುಣಮಟ್ಟದ ಆಯುಷ್ ಉತ್ಪನ್ನಗಳಿಗೆ ಅಧಿಕೃತತೆಯನ್ನು ನೀಡುತ್ತದೆ. ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ಪರಿಶೀಲಿಸಿದ ಉತ್ಪನ್ನಗಳಿಗೆ ಈ ಗುರುತು ನೀಡಲಾಗುವುದು. ಇದು ಜನರಲ್ಲಿ (ಗ್ರಾಹಕರಿಗೆ) ಗುಣಮಟ್ಟದ ಆಯುಷ್ ಉತ್ಪನ್ನಗಳ ಖರೀದಿಯ ವಿಶ್ವಾಸವನ್ನು ಮೂಡಿಸಲಿದೆ’ ಎಂದು ಹೇಳಿದರು.

ಕೇಂದ್ರ ಆಯುಷ್ ಸಚಿವಾಲಯವು ಸಾಂಪ್ರದಾಯಿಕ ಔಷಧ ಕ್ಷೇತ್ರದಲ್ಲಿ ಸ್ಟಾರ್ಟ್- ಅಪ್ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಕ್ರಮಗಳನ್ನು ಕೈಗೊಂಡಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.