ಬೆಂಗಳೂರು: ಗುರುವಾರ ನಡೆದ ಜಿ–20 ದೇಶಗಳ ಹಣಕಾಸು ಸಚಿವರ ಸಭೆಯಲ್ಲಿ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅಮೆರಿಕದ ಹಣಕಾಸು ಕಾರ್ಯದರ್ಶಿ ಜಾನೆಟ್ ಯೆಲೆನ್ರವರು ಜಾಗತಿಕ ಸಾಲ ದೋಷಗಳು, ಕ್ರಿಪ್ಟೊ ಮತ್ತು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ ಬಲವರ್ಧನೆ ಕುರಿತಂತೆ ಚರ್ಚೆ ನಡೆಸಿದರು ಎಂದು ಹಣಕಾಸು ಸಚಿವಾಲಯವು ತಿಳಿಸಿದೆ.

ಯೆಲೆನ್ ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ವಿವರಿಸುವ ಸಾಧ್ಯತೆ ಇದ್ದು, ಜಿ–20 ಶೃಂಗಸಭೆಯ ಸಂದರ್ಭ ಏಳು ರಾಷ್ಟ್ರಗಳ ಪ್ರತಿನಿಧಿಗಳ ಜೊತೆಗಿನ ಸಭೆಯಲ್ಲಿ ಭಾಗವಹಿಸುವರು.

ಭಾರತವು ತನ್ನ ಅಧ್ಯಕ್ಷತೆಯಲ್ಲಿ ಮೊದಲ ವರ್ಷದ ಜಿ-20 ಕಾರ್ಯಕ್ರಮವನ್ನು ಟೆಕ್ ಹಬ್ ಬೆಂಗಳೂರಿನ ಹೊರವಲಯದಲ್ಲಿರುವ ಪ್ರಸಿದ್ಧ ನಂದಿಬೆಟ್ಟದಲ್ಲಿ ಆಯೋಜಿಸುತ್ತಿದೆ.

‘ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು (ಎಂಬಿಡಿ), ಜಾಗತಿಕ ಸಾಲದ ದೋಷಗಳು, ಕ್ರಿಪ್ಟೊ ಆಸ್ತಿಗಳು ಹಾಗೂ ಶಕ್ತಿ ಪರಿವರ್ತನೆ ಪಾಲುದಾರಿಕೆ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ’ ಎಂದು ಹಣಕಾಸು ಸಚಿವಾಲಯವು ಟ್ವೀಟ್ ಮೂಲಕ ತಿಳಿಸಿದೆ.

ಪಾಲುದಾರಿಕೆಯ ಅಡಿಯಲ್ಲಿ, ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು, ಹಾಗೆಯೇ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು ಮತ್ತು ಏಜೆನ್ಸಿಗಳು, ಕಲ್ಲಿದ್ದಲು ಉತ್ಪಾದನೆ ಮತ್ತು ಬಳಕೆಯಿಂದ ದೂರ ಸರಿದು ಅಭಿವೃದ್ಧಿ ಆರ್ಥಿಕತೆ ಹೊಂದಲು ಹಣಕಾಸು ಒದಗಿಸುತ್ತವೆ ಎಂದು ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.