ನವದೆಹಲಿ:ಭಾರತದಲ್ಲಿ ಇನ್ನು ಮುಂದೆ ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಇತ್ತೀಚೆಗಷ್ಟೇ ನೀಡಿರುವ ತೀರ್ಪು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದಲ್ಲಿ ಸಂಭ್ರಮ ತರಿಸಿದೆ. ಆದರೆ, ಈ ತೀರ್ಪುಭಾರತೀಯ ಸೇನಾ ವಲಯವನ್ನು ಚಿಂತಿಗೀಡು ಮಾಡಿದೆ.

ಸುಪ್ರೀಂ ಕೋರ್ಟ್‌ನ ಈ ತೀರ್ಪು ಭಾರತೀಯ ಸೇನಾ ಸಿಬ್ಬಂದಿಗೂ ಅನ್ವಯವಾಗುವ ಬಗ್ಗೆ ಸೇನಾ ಕಾನೂನು ತಜ್ಞರಲ್ಲಿ ಗೊಂದಲ ಉಂಟು ಮಾಡಿದೆ. ಹಲವು ಕಠಿಣ ನಿಯಮಗಳನ್ನು ರೂಢಿಸಿಕೊಂಡಿರುವ ಸೇನೆಗೂ ’ಸಲಿಂಗಕಾಮ ಅಪರಾಧ ಅಲ್ಲ’ ಎಂಬ ತೀರ್ಪು ಪೂರ್ಣ ಅನ್ವಯವಾಗುವುದಾದರೆ, ದೇಶದ ಸೇನಾ ಪಡೆಗಳಲ್ಲಿ ಉಂಟು ಮಾಡಬಹುದಾದ ಪರಿಣಾಮಗಳ ಬಗ್ಗೆ ಪ್ರಶ್ನೆ ಎದ್ದಿವೆ.

ಭಾರತೀಯ ಸೇನೆಯ ಮೂರೂ ಪಡೆಗಳಲ್ಲಿ ಅಳವಡಿಸಿಕೊಂಡಿರುವ ಕಾನೂನಿನ ಅನ್ವಯ ಸಲಿಂಗಕಾಮಕ್ಕೆ ನಿಷೇಧವಿದೆ. ಸಲಿಂಗಕಾಮ ನಡೆಸಿದ ಸೇನಾ ಸಿಬ್ಬಂದಿ ವಿರುದ್ಧ ತೆಗೆದುಕೊಳ್ಳುವ ಕಠಿಣ ಕ್ರಮಗಳ ಬಗ್ಗೆ ಸ್ಪಷ್ಟತೆ ಇಲ್ಲವಾದರೂ, ಇದೊಂದು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸಲಾಗುತ್ತಿದೆ.

ಕಳೆದ ವಾರ ಸೇನೆಯ ಎಲ್ಲ ಕರ್ನಲ್‌ಗಳು ಹಾಗೂ ಅವರ ಪತ್ನಿಯರನ್ನು ದೆಹಲಿಯ ಮಾಣಿಕ್‌ಷಾ ಕೇಂದ್ರದಲ್ಲಿ ಸೇರುವಂತೆ ಸೂಚಿಸಿದ್ದ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ’ನೀತಿಗೇಡುತನ’ವನ್ನು ಮರೆ ಮಾಡಲಾಗದು ಎಂದು ಎಚ್ಚರಿಕೆ ನೀಡಿದ್ದರು. ಸುಪ್ರೀಂ ಕೋರ್ಟ್ ತೀರ್ಪಿನಿಂದ ನೈತಿಕತೆಯ ಪತನದಕುರಿತಾದಪ್ರಶ್ನೆಯನ್ನು ಎತ್ತಿದೆ.

ಸೇನಾ ಕಾಯ್ದೆ 1950ರ ಸೆಕ್ಷನ್ 45, ಅಧಿಕಾರಿಗಳ ’ಅನುಚಿತ ವರ್ತನೆ’; ಸೆಕ್ಷನ್ 46(ಎ) ಪ್ರಕಾರ, ಯಾವುದೇ ವ್ಯಕ್ತಿಯ ಅವಮಾನಕಾರಿ ನಡವಳಿಕೆ, ಅಸಭ್ಯ, ಕ್ರೂರ ಅಥವಾ ಅನೈಸರ್ಗಿಕ ನಡವಳಿಕೆ ಕಂಡು ಬಂದಲ್ಲಿಸೇನಾ ನ್ಯಾಯಾಲಯದ (ಕೋರ್ಟ್ ಮಾರ್ಷಲ್) ವಿಚಾರಣೆ ಎದುರಿಸಬೇಕಾಗುತ್ತದೆ. ತಪ್ಪು ಸಾಬೀತಾದರೆ ಏಳು ವರ್ಷಗಳ ವರೆಗೂ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ವಾಯುಪಡೆಯ ಕಾಯ್ದೆ 1950, ಸೆಕ್ಷನ್ 45 ಮತ್ತು 46(ಎ) ಸಹ ಸೇನಾ ಕಾಯ್ದೆಯ ಕ್ರಮಗಳನ್ನೇ ಒಳಗೊಂಡಿದೆ. ನೌಕಾ ಪಡೆ ಕಾಯ್ದೆ, 1957ರ ಪ್ರಕಾರ ಅಸಭ್ಯ ವರ್ತನೆಗೆ 2 ವರ್ಷಗಳ ವರೆಗೂ ಜೈಲು ಶಿಕ್ಷೆ ವಿಧಿಸುವಅವಕಾಶವಿದೆ.

ಭಾರತೀಯ ಸೇನಾ ಪಡೆಗಳ ಕಾನೂನಿನ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ಯಾವ ರೀತಿಯ ಪರಿಣಾಮವನ್ನು ಉಂಟು ಮಾಡಲಿದೆ ಎಂಬುದನ್ನು ತೀರ್ಪುಪೂರ್ಣವಾಗಿ ಓದಿದ ಬಳಿಕವೇ ತಿಳಿಯಲು ಸಾಧ್ಯ ಎಂದು ಸೇನಾ ಮೂಲಗಳು ತಿಳಿಸಿರುವುದಾಗಿ ದಿ ಪ್ರಿಂಟ್‌ವರದಿ ಮಾಡಿದೆ. ಕಾನೂನು ತಜ್ಞರ ಪ್ರಕಾರ, ಭಾರತೀಯ ಸೇನೆಯಲ್ಲಿಯೂ ಸಲಿಂಗಕಾಮ ಅಪರಾಧ ಮುಕ್ತತೀರ್ಪು ಅನ್ವಯವಾಗಲಿದೆ.

ಇದನ್ನೂ ಓದಿ:ಸಮ್ಮತಿಯ ಸಲಿಂಗಕಾಮ ಅಪರಾಧವಲ್ಲ

ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ’ಮಿಲಿಟರಿ ಕಾನೂನುಗಳನ್ನು ಮಾನವೀಯಗೊಳಿಸಲಿದೆ’ ಎಂದು ಸೇವೆ ಮತ್ತು ಸೇನಾ ವಿಷಯಗಳಲ್ಲಿ ತಜ್ಞತೆ ಹೊಂದಿರುವ ಚಂಡೀಗಢ ಮೂಲದ ವಕೀಲ ಮನೋಜ್ ನವದೀಪ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ. ಸೇನಾ ಕಾಯ್ದೆ ಸೆಕ್ಷನ್ 46ರಲ್ಲಿ ’ಅನೈಸರ್ಗಿಕ’ ಪದ ಬಳಕೆಯಾಗಿದೆ. ಐಪಿಸಿ ಸೆಕ್ಷನ್ 377ರಲ್ಲಿ ಸಹ ಪ್ರಸ್ತಾಪವಿರುವ ’ಅನೈಸರ್ಗಿಕ’ ಎಂಬ ಅಂಶ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಅಪ್ರಸ್ತುತವಾಗಿದೆ. ಆದರೆ, ಕ್ರೂರ ನಡವಳಿಕೆ ಅಥವಾ ಅಸಭ್ಯ ವರ್ತನೆಗಳಿಗೆ ಸೆಕ್ಷನ್ 46ರ ಅಡಿಯಲ್ಲಿ ಕ್ರಮಕೈಗೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿವಾಹೇತರ ಸಂಬಂಧ: ಸೇನಾ ಪಡೆಗಳಲ್ಲಿ ವಿವಾಹೇತರ ಸಂಬಂಧಗಳನ್ನು ಸಹ ಅಪರಾಧವಾಗಿ ಪರಿಗಣಿಸಲಾಗುತ್ತದೆ. ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಈ ಬಗೆಗಿನ ಪ್ರಸ್ತಾಪಗಳ ಕುರಿತು ಗಮನಿಸಬೇಕಾಗಿದೆ ಎಂದು ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ. ಕುಟುಂಬಗಳಿಂದ ದೂರದಲ್ಲಿರುವ ಯೋಧರನ್ನು ತಿಂಗಳಗಟ್ಟಲೆ ಬೇರೆ ಬೇರೆ ಜಾಗಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ತನ್ನೊಳಗಿನ ಮಾತು–ಭಾವನೆಗಳನ್ನು ಹಂಚಿಕೊಳ್ಳಲು ಸಹ– ಸಿಬ್ಬಂದಿ ಸಿಗುತ್ತಾರೆ. ಆದರೆ, ಇಲ್ಲಿ ಲೈಂಗಿಕ ಸಂಪರ್ಕಕ್ಕೆ ಆಸ್ಪದವಿಲ್ಲ ಎಂದಿದ್ದಾರೆ.

ಕೋರ್ಟ್ ತೀರ್ಪು ಸೇನೆ ವಿಚಾರಕ್ಕಿಂತ ಭಿನ್ನ ಎಂದಿರುವ ಸೇನೆಯ ವಕೀಲರು, ಈ ಕುರಿತು ಸೇನೆ ಚಿಂತಿಸುವ ಅಗತ್ಯವಿಲ್ಲ ಎಂದಿದ್ದಾರೆ. ಸೇನಾ ಪಡೆಗಳಲ್ಲಿ ಸೇನಾ ಕಾಯ್ದೆ, ಸೆಕ್ಷನ್ 46(ಬಿ) ಅಡಿಯಲ್ಲಿ ಸಲಿಂಗಕಾಮ ಅಪರಾಧ ವರ್ತನೆಯಾಗಿ ಪರಿಣಿತವಾಗಲಿದೆ. ರೋಗವಿರುವುದಾಗಿ ನಟಿಸುವ, ದೌರ್ಬಲ್ಯ ಇರುವುದಾಗಿ ಸುಳ್ಳು, ರೋಗ ಹರಡಲು ಪ್ರಯತ್ನಿಸುವಪ್ರಕರಣಗಳಲ್ಲಿ ಈ ಸೆಕ್ಷನ್ ಬಳಕೆಯಾಗುತ್ತದೆ. ಇದರೊಂದಿಗೆ ಸೆಕ್ಷನ್ 63 (ಶಿಸ್ತು ಮತ್ತು ಉತ್ತಮ ನಡವಳಿಕೆಯ ಉಲ್ಲಂಘನೆ) ಅಡಿಯಲ್ಲಿಸಲಿಂಗಕಾಮ ನಡೆಸುವವರನ್ನು ಶಿಕ್ಷೆಗೆ ಒಳಪಡಿಸುವ ಅವಕಾಶವಿದೆ. ಆದರೆ, ಸೆಕ್ಷನ್ 69ರ ಅಡಿಯಲ್ಲಿ ಅವಕಾಶವಿಲ್ಲ ಎಂದು ವಿವರಿಸಿದ್ದಾರೆ.

ಸೇನೆಗೆ ಅನ್ವಯವಾಗುವ ಹಕ್ಕುಗಳನ್ನು ನಿರ್ಧರಿಸಲು ಸಂವಿಧಾನದ 33ನೇ ವಿಧಿ ಅಡಿಯಲ್ಲಿ ಸಂಸತ್ತಿಗೆ ಅಧಿಕಾರವಿದೆ. ಸೇನೆಯಲ್ಲಿಯೂ ’ಸಲಿಂಗಕಾಮ ಅಪರಾಧವಲ್ಲ’ ಎಂಬುದನ್ನು ಜಾರಿಗೊಳಿಸಲು ಕಾನೂನಿಗೆ ಸೂಕ್ತ ತಿದ್ದುಪಡಿ ಅಥವಾ ಆದೇಶವನ್ನು ಹೊರಡಿಸಬೇಕಾಗುತ್ತದೆ ಎಂದಿದ್ದಾರೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸಲಿಂಗಕಾಮದ ಕುರಿತಾದ ಕ್ರಮಗಳ ಬಗ್ಗೆ ಇನ್ನೂ ಹಗ್ಗಜಗ್ಗಾಟ ನಡೆಯುತ್ತಿದೆ. ಅಮೆರಿಕ ಮತ್ತು ಬ್ರಿಟನ್ ಸೇನೆಗಳು ಸಲಿಂಗಕಾಮಿಗಳನ್ನುತನ್ನ ಪಡೆಗಳಲ್ಲಿ ನೇಮಿಸಿಕೊಳ್ಳುತ್ತಿವೆ. ಜಗತ್ತಿನ ಸೇನಾ ಪಡೆಗಳ ಪೈಕಿಸಲಿಂಗಕಾಮಿಗಳಿಗೆ ಭಾರತೀಯ ಸೇನೆಯಲ್ಲಿ ಅತಿ ಕಡಿಮೆ ಅವಕಾಶವಿರುವುದಾಗಿ ಅಧ್ಯಯನವೊಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.