ವಿಶಾಖಪಟ್ಟಣ: ಭಾರತೀಯ ನೌಕಾಪಡೆಯ ಬಲವನ್ನು ಹೆಚ್ಚಿಸಿರುವ ದೇಶದಲ್ಲಿ ನಿರ್ಮಾಣವಾದ ಅತಿದೊಡ್ಡ ಸಮೀಕ್ಷಾ ನೌಕೆ, 'ಐಎನ್‌ಎಸ್ ಸಂಧಾಯಕ್' ಅನ್ನು ಇಂದು ಕರ್ತವ್ಯಕ್ಕೆ ನಿಯೋಜಿಸಲಾಯಿತು.

ವಿಶಾಖಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ 'ಐಎನ್‌ಎಸ್ ಸಂಧಾಯಕ್' ಅನ್ನು ನೌಕಾಪಡೆಗೆ ನಿಯೋಜಿಸಿದರು. ನೌಕಪಡೆ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ ಉಪಸ್ಥಿತರಿದ್ದರು.

'ಐಎನ್‌ಎಸ್ ಸಂಧಾಯಕ್' ನಿಯೋಜನೆಯಿಂದ ಜಲಮಾರ್ಗಗಳಲ್ಲಿ ಭಾರತದ ಕಣ್ಗಾವಲು ಸಾಮರ್ಥ್ಯ ಇನ್ನಷ್ಟು ವೃದ್ಧಿಸಿದೆ.

ನೌಕಾಪಡೆಗಾಗಿ ಕೋಲ್ಕತ್ತದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಆ್ಯಂಡ್ ಎಂಜಿನಿಯರ್ಸ್ (ಜಿಆರ್‌ಎಸ್‌ಇ) ಲಿಮಿಟೆಡ್, ತಯಾರಿಸುತ್ತಿರುವ ನಾಲ್ಕು ಸಮೀಕ್ಷಾ ನೌಕೆಗಳಲ್ಲಿ ಇದು ಮೊದಲನೆಯದ್ದಾಗಿದೆ. ಈ ನೌಕೆಯನ್ನು ಕಳೆದ ವರ್ಷ ಡಿಸೆಂಬರ್ 4ರಂದು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿತ್ತು.

ಬಂದರು, ನ್ಯಾವಿಗೇಷನ್ ಚಾನಲ್, ಕರಾವಳಿ ಪ್ರದೇಶ, ಆಳವಾದ ನೀರಿನ ಸಮಗ್ರ ಹೈಡ್ರೋಗ್ರಾಫಿಕ್ ಸಮೀಕ್ಷೆ ಇದರ ಪ್ರಾಥಮಿಕ ಕರ್ತವ್ಯವಾಗಿದೆ. ಎರಡನೇಯದ್ದಾಗಿ ನೌಕೆಯು ಕಾರ್ಯಾಚರಣೆ ನಡೆಸಲು ಸಮರ್ಥವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.