ನವದೆಹಲಿ: ‘ದೇಶದ ಗಡಿಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ. ನಿರ್ದಿಷ್ಟ ದಾಳಿಯ (ಸರ್ಜಿಕಲ್ ಸ್ಟ್ರೈಕ್) ಮೂಲಕ ಭಯೋತ್ಪಾದಕರ ಸದ್ದಡಗಿಸಲಾಗಿದೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಗುರುವಾರ ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮ್ಮೇಳನವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಚೀನಾ ಅಥವಾ ಪಾಕಿಸ್ತಾನ, ಯಾವ ರಾಷ್ಟ್ರವೇ ಆಗಿದ್ದರೂ ಸರಿ ದುರುದ್ದೇಶಪೂರಿತ ದಾಳಿಗೆ ಮುಂದಾದಾಗಲೆಲ್ಲಾ ಭಾರತದ ಸಶಸ್ತ್ರ ಪಡೆಗಳು ತಕ್ಕ ಪ್ರತ್ಯುತ್ತರ ನೀಡಿವೆ’ ಎಂದರು.

‘ಭಯೋತ್ಪಾದನೆಯಂತಹ ವಿಷಯಗಳಲ್ಲಿ ಭಾರತವು ಇಡೀ ಜಗತ್ತನ್ನೇ ಮುನ್ನಡೆಸಿದೆ. ಈ ಅಪಾಯವನ್ನು ತೊಡೆದು ಹಾಕಲು ಅಗತ್ಯವಿರುವ ಬೆಂಬಲವನ್ನು ಪಡೆಯುವಲ್ಲಿ ಯಶಸ್ವಿಯೂ ಆಗಿದೆ’ ಎಂದು ತಿಳಿಸಿದರು.

‘ತನ್ನ ನೆಲದಲ್ಲಿ, ಅಗತ್ಯ ಬಿದ್ದರೆ ವಿದೇಶದಲ್ಲೂ ಭಯೋತ್ಪಾದಕರ ಮೇಲೆ ದಾಳಿ ನಡೆಸಬಲ್ಲ ಸಾಮರ್ಥ್ಯ ಭಾರತಕ್ಕಿದೆ ಎಂಬ ಸ್ಪಷ್ಟ ಸಂದೇಶವು ಇಡೀ ಜಗತ್ತಿಗೆ ರವಾನೆಯಾಗಿದೆ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಹೊಂದಿರುವ ಬಲವಾದ ಇಚ್ಛಾಶಕ್ತಿಯ ಫಲಿತಾಂಶ ಇದಾಗಿದೆ’ ಎಂದು ಹೇಳಿದರು.

‘ಭಾರತವು ಅನಗತ್ಯವಾಗಿ ಯಾರಿಗೂ ಹಾನಿ ಮಾಡುವುದಿಲ್ಲ. ದೇಶದ ಏಕತೆ, ಸಮಗ್ರತೆ ಹಾಗೂ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟುಮಾಡುವವರನ್ನು ಸುಮ್ಮನೆ ಬಿಡುವುದಿಲ್ಲ ಎಂಬುದು ಭಯೋತ್ಪಾದನೆಯನ್ನೇ ಅಸ್ತ್ರವಾಗಿಸಿಕೊಂಡಿರುವ ರಾಷ್ಟ್ರಗಳಿಗೆ ಚೆನ್ನಾಗಿ ಗೊತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ ಭಾರತವು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.