ಡಿಬ್ರುಗಢ: ಮುಖ್ಯವಾಹಿನಿ ಧರ್ಮಗಳು ನಡೆಸುವ ಮತಾಂತರ ಪ್ರಯತ್ನಕ್ಕೆ ದೇಶದ ಸ್ಥಳೀಯ ಜನಾಂಗಗಳೇ ಹೆಚ್ಚಾಗಿ ಗುರಿಯಾಗುತ್ತವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಾನುವಾರ ಹೇಳಿದರು.

ಅಂತರರಾಷ್ಟ್ರೀಯ ಸಂಸ್ಕೃತಿ ಅಧ್ಯಯನ ಕೇಂದ್ರ (ಐಸಿಸಿಎಸ್) ಆಯೋಜಿಸಿದ್ದ 8ನೇ ‘ಅಂತರರಾಷ್ಟ್ರೀಯ ಸಮ್ಮೇಳನ ಮತ್ತು ಹಿರಿಯರ ಕೂಟ’ ಕಾರ್ಯಕ್ರಮದಲ್ಲಿ ಅವರು ಹೀಗೆ ಹೇಳಿದರು.

ಸರಕು ಸಾಮಗ್ರಿಗಳು, ಶಿಕ್ಷಣ, ಆರೋಗ್ಯ ಸೇವೆಯ ಆಮಿಷ ಒಡ್ಡುವ ಮೂಲಕ ಹಲವು ಧರ್ಮಗಳ ಧರ್ಮಪ್ರಚಾರಕರು ಸ್ಥಳೀಯ ಜನಾಂಗದ ಜನರನ್ನು ಮತಾಂತರಕ್ಕೆ ಮನವೊಲಿಸುತ್ತಾರೆ. ಇದರಿಂದಾಗಿ ಸ್ಥಳೀಯ ಧರ್ಮ, ಸಂಪ್ರದಾಯ ಪಾಲಿಸುವವರ ಸಂಖ್ಯೆ ಕಾಲಕ್ರಮೇಣವಾಗಿ ಕಡಿಮೆಯಾಗಿದೆ. ಇದು ಸಂಸ್ಕೃತಿ ಮತ್ತು ಆಚರಣೆಗಳ ಮೇಲೂ ವ್ಯಕ್ತಿರಿಕ್ತ ಪರಿಣಾಮ ಬೀರಿದೆ ಎಂದು ಅವರು ಹೇಳಿದರು.

ಬುಡಕಟ್ಟು ಜನಾಂಗಗಳ ಹಕ್ಕುಗಳ ಹೋರಾಟಗಾರ ಬಿರ್ಸಾ ಮುಂಡಾ ಅವರು ಮತಾಂತರದ ವಿರುದ್ಧ ನಡೆಸಿದ ಹೋರಾಟವನ್ನು ಮತ್ತು ಸಾಮೂಹಿಕ ಮತಾಂತರವನ್ನು ಮಹಾತ್ಮ ಗಾಂಧಿ ವಿರೋಧಿಸಿದ್ದನ್ನು ಅವರು ಈ ವೇಳೆ ನೆನೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.