ಜಕಾರ್ತಾ: 53 ಮಂದಿ ಸಿಬ್ಬಂದಿ ಇದ್ದ ಜಲಾಂತರ್ಗಾಮಿಯೊಂದು ಬಾಲಿಯ ರೆಸಾರ್ಟ್ ದ್ವೀಪದ ಬಳಿ ನಾಪತ್ತೆಯಾಗಿದ್ದು, ನೌಕಾಪಡೆಯು ಶೋಧಕಾರ್ಯ ನಡೆಸುತ್ತಿದೆ ಎಂದು ಇಂಡೊನೇಷ್ಯಾದ ಸೇನೆ ಬುಧವಾರ ತಿಳಿಸಿದೆ.

ಬಾಲಿಯಿಂದ ಉತ್ತರಕ್ಕೆ 60 ಮೈಲಿ (95 ಕಿಲೋಮೀಟರ್) ನೀರಿನಲ್ಲಿ ಜಲಾಂತರ್ಗಾಮಿ ನೌಕೆಯು ಕಣ್ಮರೆಯಾಗಿದೆ. ಕೆಆರ್‌ಐ ನಂಗಾಲ 402 ಹೆಸರಿನ ಜಲಂತರ್ಗಾಮಿ ನೌಕೆಯು ತರಬೇತಿಯಲ್ಲಿ ಪಾಲ್ಗೊಂಡಿದ್ದು, ನಿಗದಿತ ಸಮಯಕ್ಕೆ ವಾಪಸಾಗಲಿಲ್ಲ. ಕಾಣೆಯಾಗಿರುವ ಜಲಂತರ್ಗಾಮಿಯ ಶೋಧಕ್ಕೆ ನೌಕಾಪಡೆಯು ಹಡಗುಗಳನ್ನು ನಿಯೋಜಿಸಲಾಗಿದೆ. ಜಲಾಂತರ್ಗಾಮಿ ಸಂರಕ್ಷಣಾ ಹಡಗುಗಳನ್ನು ಹೊಂದಿರುವ ಸಿಂಗಾಪುರ ಮತ್ತು ಆಸ್ಟ್ರೇಲಿಯಾದಿಂದಲೂ ನೆರವು ಕೇಳಲಾಗಿದೆ ಸೇನಾ ಮುಖ್ಯಸ್ಥ ಹದಿ ಜಜಾಂಟೊ ಹೇಳಿದ್ದಾರೆ.

700 ಮೀಟರ್ (2,300 ಅಡಿ) ಆಳ ಸಮುದ್ರದಲ್ಲಿ ಜಲಂತರ್ಗಾಮಿ ಮುಳುಗಿರುವುದಾಗಿ ನೌಕಾಪಡೆ ನಂಬಿದೆ. ಜಲಂತರ್ಗಾಮಿ ಕಾಣೆಯಾಗಿರುವುದಕ್ಕೆ ಕಾರಣದ ಮಾಹಿತಿಗಳು ತಕ್ಷಣಕ್ಕೆ ಗೊತ್ತಾಗಿಲ್ಲ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.

ಜರ್ಮನಿ ನಿರ್ಮಿತ ಜಲಾಂತರ್ಗಾಮಿ ನೌಕೆಯು1980ರ ದಶಕದ ಆರಂಭದಿಂದಲೂ ಸೇವೆಯಲ್ಲಿದ್ದು, ಕ್ಷಿಪಣಿ ಉಡಾವಣೆಯ ಪ್ರಯೋಗದ ತಾಲೀಮು ನಡೆಸುತ್ತಿದ್ದು, ಗುರುವಾರ ನಡೆಯಲಿದ್ದ ತಾಲೀಮು ವೇಳೆ ಜಜಾಂಟೊ ಮತ್ತು ಸೇನೆಯ ಇತರ ಪ್ರಮುಖರು ಭಾಗವಹಿಸಬೇಕಿತ್ತು.

ಇಂಡೊನೇಷ್ಯಾ ಪ್ರಸ್ತುತ ಐದು ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದೆ. 2024ರ ವೇಳೆಗೆ ಕನಿಷ್ಠ ಎಂಟು ಜಲಂತರ್ಗಾಮಿಗಳು ಕಾರ್ಯಾಚರಣೆ ನಡೆಸುವ ಯೋಜನೆಯನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.