ನವದೆಹಲಿ:ಸ್ಥಳೀಯ, ಪ್ರಾದೇಶಿಕ ಅಗತ್ಯಗಳ ಅನುಸಾರ ಹಾಗೂ ಮಕ್ಕಳು, ಮಧುಮೇಹಿಗಳು ಮತ್ತು ಆರೋಗ್ಯಕ್ಕೆ ಪೂರಕವಾದ ತಿನಿಸುಗಳ ಸೇರ್ಪಡೆ ಕುರಿತು ಮುಕ್ತ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ರೈಲ್ವೆ ಮಂಡಳಿಯು, ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮಕ್ಕೆ (ಐಆರ್‌ಸಿಟಿಸಿ) ನೀಡಿದೆ.

ಐಆರ್‌ಸಿಟಿಸಿಗೆ ಈ ಕುರಿತು ರೈಲ್ವೆ ಮಂಡಳಿಯು ಪತ್ರ ಬರೆದಿದೆ. ರೈಲುಗಳಲ್ಲಿ ಆಹಾರ ಪೂರೈಕೆ ವ್ಯವಸ್ಥೆ ಉತ್ತಮಪಡಿಸುವುದು ಹಾಗೂ ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆ ನೀಡುವುದು ಇದರ ಉದ್ದೇಶ ಎನ್ನಲಾಗಿದೆ.

ಪ್ರಸ್ತುತ, ಐಆರ್‌ಸಿಟಿಸಿಯು ಆಹಾರ ಪೂರೈಕೆ ಪಟ್ಟಿಗೆ ಯಾವುದೇ ತಿನಿಸು ಸೇರ್ಪಡೆ ಮಾಡಲು ರೈಲ್ವೆ ಮಂಡಳಿಯ ಪೂರ್ವಾನುಮತಿ ಪಡೆಯುವುದು ಅಗತ್ಯವಾಗಿತ್ತು. ರೈಲ್ವೆ ಟಿಕೆಟ್ ದರದಲ್ಲಿಯೇ ಆಹಾರದ ಮೊತ್ತವೂ ಸೇರಿಸುವ ಸಂದರ್ಭದಲ್ಲಿ, ಪೂರೈಸಲಾಗುವ ತಿನಿಸು ಕುರಿತು ಈಗ ಐಆರ್‌ಸಿಟಿಸಿ ನಿರ್ಧರಿಸಲಿದೆ.

ಇದನ್ನು ಹೊರತುಪಡಿಸಿ ಗರಿಷ್ಠ ಮಾರಾಟ ಬೆಲೆ ಮುದ್ರಿತ ವಿವಿಧ ಬ್ರಾಂಡ್‌ಗಳ ಆಹಾರ, ತಿನಿಸುಗಳನ್ನು ರೈಲುಗಳಲ್ಲಿ ಮಾರಲು ಅವಕಾಶವಿದೆ. ಇದನ್ನು ಐಆರ್‌ಸಿಟಿಸಿ ನಿರ್ಧರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.