ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿಯು(ಸಿಎಂಒ) ಔರಂಗಾಬಾದ್ ಅನ್ನು ಸಂಭಾಜಿನಗರ ಎಂದು ಉಲ್ಲೇಖಿಸಿರುವುದನ್ನು ಸಮರ್ಥಿಸಿರುವ ಶಿವಸೇನಾ ನಾಯಕ ಸಂಜಯ್ ರಾವುತ್, ಸರ್ಕಾರಿ ದಾಖಲೆಗಳಲ್ಲಿ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಹೆಸರನ್ನು ಬಳಸುವುದು ಅಪರಾಧವೇ ಎಂದು ಪ್ರಶ್ನಿಸಿದ್ದಾರೆ.

ಔರಂಗಾಬಾದ್ ಬದಲು ಸಂಭಾಜಿನಗರ ಎಂದು ಬಳಸಿರುವುದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ರಾವುತ್, ‘ಸಿಎಂಒ ಟ್ವೀಟ್ನಲ್ಲಿ ಸಂಭಾಜಿನಗರ ಎಂದು ಬಳಸಿರುವುದು ಸರಿಯಾಗಿದೆ. ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರು ಸಂಭಾಜಿನಗರ ಎಂದು ಹೆಸರು ನೀಡಿದ್ದರು. ಅದು ಹಾಗೆಯೇ ಉಳಿಯಲಿದೆ. ಹೆಸರು ಬದಲಾವಣೆಗೆ ಕಾಂಗ್ರೆಸ್ ವಿರೋಧವಿಲ್ಲ. ಹೀಗಿದ್ದರೂ, ಪ್ರಸ್ತಾವಕ್ಕೆ ಸಾರ್ವಜನಿಕವಾಗಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಔರಂಗಜೇಬ್ ಜಾತ್ಯಾತೀತ ವ್ಯಕ್ತಿಯಾಗಿರಲಿಲ್ಲ’ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್ಸಿಪಿ ಜೊತೆಗೂಡಿ ಅಧಿಕಾರ ನಡೆಸುತ್ತಿರುವ ಶಿವಸೇನಾ, ಹಿಂದಿನಿಂದಲೂ ಔರಂಗಾಬಾದ್ ಹೆಸರು ಬದಲಾವಣೆಗೆ ಬೇಡಿಕೆ ಇರಿಸುತ್ತಿದೆ. ಆದರೆ, ಮಹಾರಾಷ್ಟ್ರ ಸಚಿವ, ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಾಳಾಸಾಹೆಬ್ ಥೋರಟ್ ಅವರು ಔರಂಗಾಬಾದ್ ಹೆಸರು ಬದಲಾವಣೆಗೆ ತಮ್ಮ ಪಕ್ಷವು ತೀವ್ರವಾಗಿ ವಿರೋಧಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ‘ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯವು ತನ್ನಷ್ಟಕ್ಕೇ ನಗರವೊಂದರ ಹೆಸರು ಬದಲಾಯಿಸಬಾರದು’ ಎಂದು ಸಿಎಂಒ ಟ್ವೀಟ್ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.