ನವದೆಹಲಿ: ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಗ್ರಾಹಕರ ಬೇಡಿಕೆಯ ಅನುಸಾರ ಮರುವಿನ್ಯಾಸಗೊಳಿಸಬಲ್ಲ ‘ಬುದ್ಧಿಶಾಲಿ’ ಜಿ–ಸ್ಯಾಟ್ ಉಪಗ್ರಹಗಳನ್ನು ಅಭಿವೃದ್ಧಿಪಡಿಸಲಿದೆ’ ಎಂದು ಇಸ್ರೊ ಮುಖ್ಯಸ್ಥ ಎಸ್.ಸೋಮನಾಥ್ ಸೋಮವಾರ ಹೇಳಿದ್ದಾರೆ.

‘ವಿಭಿನ್ನ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಬಲ್ಲ ಸಂವೇದನಾಶೀಲ ಜಿ–ಸ್ಯಾಟ್ ಉಪಗ್ರಹಗಳನ್ನುಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಇಸ್ರೊದ ವಿನ್ಯಾಸಕರ ತಂಡದೊಂದಿಗೆ ಈ ಕುರಿತು ಈಗಾಗಲೇ ಚರ್ಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಭವಿಷ್ಯದಲ್ಲಿ ನಾವು ಬಾಹ್ಯಾಕಾಶಕ್ಕೆ ಉಡ್ಡಯನ ಮಾಡುವ ಉಪಗ್ರಹಗಳು ಭಿನ್ನವಾಗಿರಲಿವೆ. ಬೇಡಿಕೆಗೆ ಅನುಗುಣವಾಗಿ ಬೀಮ್ಗಳನ್ನು ರೂಪಿಸುವ, ಆವರ್ತನ ಹಾಗೂ ಬ್ಯಾಂಡ್ವಿಡ್ತ್ಗಳನ್ನು ಬದಲಿಸುವ ಅವಕಾಶವು ಇರಲಿದೆ. ಇವು ಸಾಫ್ಟ್ವೇರ್ ಚಾಲಿತ ಹಾಗೂ ನಿಗದಿತ ಸಮಯದೊಳಗೆ ಕೆಲಸ ಪೂರ್ಣಗೊಳಿಸುವ ಸಾಮರ್ಥ್ಯವುಳ್ಳ ಉಪಗ್ರಹಗಳಾಗಿರಲಿವೆ’ ಎಂದಿದ್ದಾರೆ.

‘ವಾಣಿಜ್ಯ ಉದ್ದೇಶದೊಂದಿಗೆ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇಂತಹ ಉಪಗ್ರಹಗಳನ್ನು ಅಭಿವೃದ್ಧಿಪಡಿಸುವಂತೆ ಖಾಸಗಿ ಸಂಸ್ಥೆಗಳನ್ನೂ ಪ್ರೋತ್ಸಾಹಿಸಲಾಗುತ್ತದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.