ಇಸ್ರೊ ನಡೆಸಿರುವ ಮೊದಲ ಪರೀಕ್ಷಾ ಉಡಾವಣೆಯು ದೇಶದ ಮೊದಲ ಮಾನವಸಹಿತ ಬಾಹ್ಯಾಕಾಶ ಕಾರ್ಯಕ್ರಮವನ್ನು ಸಾಧಿಸುವ ನಿಟ್ಟಿನಲ್ಲಿ ಇಟ್ಟ ಪ್ರಮುಖ ಹೆಜ್ಜೆಯಾಗಿದೆ. ಇಸ್ರೊ ವಿಜ್ಞಾನಿಗಳಿಗೆ ಶುಭಾಶಯಗಳುನರೇಂದ್ರ ಮೋದಿ, ಪ್ರಧಾನಿ
ಮೊದಲ ಪರೀಕ್ಷಾ ಉಡಾವಣೆ ಯಶಸ್ವಿಯಾಗಿರುವುದಕ್ಕೆ ಇಸ್ರೊ ವಿಜ್ಞಾನಿಗಳಿಗೆ ಅಭಿನಂದನೆಗಳು. ಮಾನವಸಹಿತ ಗಗನಯಾನ ಕಾರ್ಯಕ್ರಮ ಕುರಿತ ಕಾರ್ಯ 2007ರಿಂದಲೇ ನಡೆದಿತ್ತು. ಈಗ ಅದು ಸಾಕಾರಗೊಳ್ಳುತ್ತಿರುವುದು ಖುಷಿ ತಂದಿದೆ.ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಮಾನವ ಸಹಿತ ಗಗನಯಾನ ಸಂದರ್ಭದಲ್ಲಿ ರಾಕೆಟ್‌ನಲ್ಲಿ ಅವಘಡ ಸಂಭವಿಸಿದ ವೇಳೆ ಕ್ರೂ ಮಾಡ್ಯೂಲ್‌ನಲ್ಲಿರುವ ಗಗನಯಾನಿಗಳು ಸುರಕ್ಷಿತವಾಗಿ ಪಾರಾಗುವುದೇ ಈ ಬಾಹ್ಯಾಕಾಶ ಕಾರ್ಯಕ್ರಮದ ಮಹತ್ವದ ಭಾಗ. ಇಂದು ನಡೆದ ಮೊದಲ ಪರೀಕ್ಷಾ ಉಡಾವಣೆ ಯಶಸ್ವಿಯಾಗಿದೆ. ಹಕ್ಕಿಯೊಂದು ತನ್ನ ಮರಿಯನ್ನು ಸುರಕ್ಷಿತ ತಾಣಕ್ಕೆ ಒಯ್ಯುವ ರೀತಿಯಲ್ಲಿಯೇ ಈ ಪ್ರಾತ್ಯಕ್ಷಿಕೆ ನಡೆದಿದೆ.ಆರ್.ಹಟ್ಟನ್, ಕ್ರೂ ಮಾಡ್ಯೂಲ್ ವಿನ್ಯಾಸ ಮತ್ತು ಅಭಿವೃದ್ಧಿ ಕಾರ್ಯಕ್ರಮದ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.