ಶ್ರೀಹರಿಕೋಟಾ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅತ್ಯಂತ ಭಾರವಾದ ರಾಕೆಟ್ LVM3-M2 ಉಡಾವಣೆ ಯಶಸ್ವಿಯಾಗಿದೆ.

ಇದು ವಾಣಿಜ್ಯಉದ್ದೇಶದ ಮೊದಲ ಉಡಾವಣೆಯಾಗಿದ್ದು, ಬ್ರಿಟನ್ನ ಮೂಲದ ಒನ್ವೆಬ್ ಲಿಮಿಟೆಡ್ನ 36 ಬ್ರಾಡ್ಬ್ಯಾಂಡ್ ಸಂವಹನ ಉಪಗ್ರಹಗಳನ್ನು ಒಟ್ಟಿಗೆ ನಭಕ್ಕೆ ಕಳುಹಿಸಲಾಗಿದೆ. ಉಪಗ್ರಹಗಳು ಕಕ್ಷೆ ಸೇರಿವೆ ಎಂದು ಖಚಿತಪಡಿಸಿರುವ ಇಸ್ರೊ ಇತಿಹಾಸ ನಿರ್ಮಿಸಿದೆ.

43.5 ಮೀಟರ್ ಎತ್ತರದ,644 ಟನ್ ತೂಕದರಾಕೆಟ್ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ ಅಕ್ಟೋಬರ್ 23ರ ಮಧ್ಯರಾತ್ರಿ ಸರಿಯಾಗಿ 12.7ಕ್ಕೆ ಉಡಾವಣೆಗೊಂಡಿತು.

ಒನ್ ವೆಬ್ ಒಂದು ಖಾಸಗಿ ಉಪಗ್ರಹ ಸಂವಹನ ಕಂಪನಿಯಾಗಿದ್ದು, ಇದರಲ್ಲಿ ಭಾರತದ ಭಾರ್ತಿ ಎಂಟರ್ಪ್ರೈಸಸ್ ಪ್ರಮುಖ ಹೂಡಿಕೆದಾರ ಮತ್ತು ಷೇರುದಾರ.

LVM3-M2 ರಾಕೆಟ್ 8,000 ಕೆ.ಜಿ.ವರೆಗಿನ ಉಪಗ್ರಹ ಸಾಗಿಸುವ ಸಾಮರ್ಥ್ಯ ಹೊಂದಿದೆ.

ಒನ್ ಒಬ್ನ ಇನ್ನೂ36 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮತ್ತೊಂದು ಕಾರ್ಯಾಚರಣೆ2023ರಜನವರಿಯಲ್ಲಿ ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.