ಬಾಘ್ಮುಂಡಿ (ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ (ಟಿಎಂಸಿ) ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಆಡಳಿತದಲ್ಲಿ 115ಹಗರಣಗಳನ್ನು ನಡೆಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಅವರು ರಾಜ್ಯದ ಅಭಿವೃದ್ಧಿಗಾಗಿ 115 ಯೋಜನೆಗಳನ್ನು ತಂದಿದ್ದಾರೆ ಎಂದು ಹೇಳಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಪಕ್ಷವುನಗರದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ಮುಖ್ಯಮಂತ್ರಿ ಮಮತಾ ಅವರನ್ನು ಗುರಿಯಾಗಿರಿಸಿ ವಾಗ್ದಾಳಿ ನಡೆಸಿದ ಶಾ, ʼಮಮತಾ ದೀದಿ ನಿಮಗೆ ಫ್ಲೋರೈಡ್ ಮಿಶ್ರಿತ ನೀರನ್ನು ನೀಡಿದ್ದಾರೆ. ಒಂದು ಬಾರಿ ನೀವು ದೀದಿಯನ್ನು ಇಲ್ಲಿಂದ ಹೊರಗಟ್ಟಿದರೆ, ಬಿಜೆಪಿ ಸರ್ಕಾರವು ನಿಮಗೆ ಶುದ್ಧ ಕುಡಿಯುವ ನೀರು ಒದಗಿಸಲು ಹತ್ತು ಸಾವಿರ ಕೋಟಿವ್ಯಯಿಸಲಿದೆʼ ಎಂದು ಭರವಸೆ ನೀಡಿದ್ದಾರೆ.

ʼಕಮ್ಯುನಿಷ್ಟರು ಇಲ್ಲಿ (ರಾಜ್ಯದಲ್ಲಿ) ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ನೀಡಲಿಲ್ಲ. ನಂತರ ದೀದಿ ಕೂಡ ಕೈಗಾರಿಕೆಗಳನ್ನು ದೂರ ಓಡಿಸಿದರು. ಟಿಎಂಸಿ ಇರಲಿಅಥವಾ ಎಡರಂಗವೇ ಆಗಿರಲಿ, ಅವರು ನಿಮಗೆ ಉದ್ಯೋಗಾವಕಾಶಗಳನ್ನು ಒದಗಿಸುವುದಿಲ್ಲ. ನಿಮಗೆ ಉದ್ಯೋಗ ಬೇಕಿದ್ದರೆ, ಎನ್ಡಿಎ ಸರ್ಕಾರಕ್ಕಾಗಿ ಮತ ಚಲಾಯಿಸಿʼ ಎಂದು ಕರೆ ನೀಡಿದರು.

ಮುಂದುವರಿದು, ʼರಾಜ್ಯದ ಏಳಿಗೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು115ಯೋಜನೆಗಳನ್ನು ತಂದರು. ಆದರೆ, ಅವು ರಾಜ್ಯದಲ್ಲಿ ಜಾರಿಗೆ ಬಂದಿಲ್ಲ. ಹಾಗೆಯೇ ಮಮತಾ ತಮ್ಮ ಅಧಿಕಾರಾವಧಿಯಲ್ಲಿ115 ಹಗರಣಗಳನ್ನು ನಡೆಸಿದ್ದಾರೆʼ ಎಂದು ಆರೋಪಿಸಿದರು.

ʼಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 18 ಸಾವಿರ ಹಣವನ್ನು ಹಾಕಲಾಗುವುದುʼ ಎಂದು ಮತದಾರರಿಗೆ ಭರವಸೆ ನೀಡಿದರು. ಇದೇ ವೇಳೆ ಅವರುಬುಡಕಟ್ಟು ಜನರ ಅಭಿವೃದ್ಧಿಗಾಗಿ ಶ್ರಮಿಸುವುದಾಗಿಯೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.