ನವದೆಹಲಿ: ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಕೇಂದ್ರದ ಮಾಜಿ ಸಚಿವ ಮತ್ತುಹಿರಿಯ ಪತ್ರಕರ್ತ ಎಂ.ಜೆ. ಅಕ್ಬರ್ ಹಾಗೂ ಭಾರತ ಸಂಜಾತೆ ಪತ್ರಕರ್ತೆ ಪಲ್ಲವಿ ಗೊಗೊಯ್ ನಡುವಣ ಆರೋಪ ಪ್ರತ್ಯಾರೋಪ ಮುಂದುವರಿದಿದೆ. ನಮ್ಮದು ಒಪ್ಪಿತ ಸಂಬಂದವಾಗಿತ್ತು ಎಂಬ ಅಕ್ಬರ್ ಹೇಳಿಕೆಗೆ ತಿರುಗೇಟು ನೀಡಿರುವಪಲ್ಲವಿ, ಬಲವಂತದಿಂದ ಮತ್ತು ಅಧಿಕಾರವನ್ನು ದುರುಪಯೋಗಿಸಿಕೊಂಡು ತಮ್ಮ ಮೇಲೆ ಅತ್ಯಾಚಾರ ಎಸಗಲಾಗಿತ್ತು ಎಂದು ಹೇಳಿದ್ದಾರೆ.

ಅಕ್ಬರ್ ಅತ್ಯಾಚಾರ ಎಸಗಿದ್ದ ಬಗ್ಗೆ ಹಾಗೂ ಲೈಂಗಿಕ ಕಿರುಕುಳ ನೀಡಿದ್ದ ಬಗ್ಗೆಪಲ್ಲವಿ ಅವರು ‘ದಿ ವಾಷಿಂಗ್ಟನ್ ಪೋಸ್ಟ್’ ದಿನಪತ್ರಿಕೆಗೆ ದೀರ್ಘ ಲೇಖನ ಬರೆದಿದ್ದರು.‘ದಿ ಏಷ್ಯನ್ ಏಜ್’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ತನಿಖಾ ವರದಿಯೊಂದರ ಕುರಿತು ಚರ್ಚಿಸಲು ಜೈಪುರದ ಹೋಟೆಲ್ಗೆ ಕರೆಸಿಕೊಂಡ ಅಕ್ಬರ್ ನನ್ನ ಮೇಲೆ ಬಲಾತ್ಕಾರ ಮಾಡಿದ್ದರು ಎಂದು ಲೇಖನದಲ್ಲಿ ಪಲ್ಲವಿ ಆರೋಪಿಸಿದ್ದರು.

ಇದನ್ನೂ ಓದಿ:ಎಂ.ಜೆ.ಅಕ್ಬರ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ ಪತ್ರಕರ್ತೆ ಪಲ್ಲವಿ ಗೊಗೊಯ್

ಇದಕ್ಕೆ ಪ್ರತಿಕ್ರಿಯಿಸಿದ್ದ ಅಕ್ಬರ್,‘ನಮ್ಮಿಬ್ಬರದು ಸಹಮತದ ಸಂಬಂಧ. ನಾವಿಬ್ಬರು ಕೆಲವು ತಿಂಗಳ ಕಾಲ ಜೊತೆಗಿದ್ದೆವು. ಇದು ನನ್ನ ಸಾಂಸರಿಕ ಜೀವನದಲ್ಲಿ ಕೋಲಾಹಲ ಎಬ್ಬಿಸಿತ್ತು’ ಎಂದು ಹೇಳಿದ್ದರು. ಪಲ್ಲವಿ ಹಾಗೂ ಅಕ್ಬರ್ ಅವರದ್ದು ಒಪ್ಪಿತ ಸಂಬಂಧವಾಗಿತ್ತು ಎಂದು ಅಕ್ಬರ್ ಪತ್ನಿ ಮಲ್ಲಿಕಾ ಅಕ್ಬರ್ ಸಹ ಶುಕ್ರವಾರ ಹೇಳಿದ್ದರು.

ಇದನ್ನೂ ಓದಿ:ನಮ್ಮಿಬ್ಬರದು ಸಹಮತದ ಸಂಬಂಧ: ಎಂ.ಜೆ. ಅಕ್ಬರ್ ಸ್ಪಷ್ಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.