ನವದೆಹಲಿ: ದೇಶದಲ್ಲೇ ಅಭಿವೃದ್ಧಿಪಡಿಸಲಾದ ಲಘು ಯುದ್ಧ ವಿಮಾನ ‘ತೇಜಸ್’ನ ನೌಕಾಪಡೆ ಆವೃತ್ತಿ ಸಿದ್ಧವಾಗಿದೆ. ಈ ವಿಮಾನವು ‘ಅರೆಸ್ಟ್ ಲ್ಯಾಂಡಿಂಗ್’ (ನಿರ್ಬಂಧಿತ ಇಳಿಕೆ) ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದು, ಯುದ್ಧ ವಿಮಾನದ ಸ್ವದೇಶಿ ನಿರ್ಮಾಣ ಕ್ಷೇತ್ರದಲ್ಲಿ ಇದೊಂದು ದೊಡ್ಡ ಹೆಜ್ಜೆಯಾಗಿದೆ.

ನೌಕಾಪಡೆ ಆವೃತ್ತಿಯ ವಿಮಾನದ ತಳಭಾಗದಲ್ಲಿ ಕೊಂಡಿ ಒಂದನ್ನು ಅಳವಡಿಸಲಾಗಿರುತ್ತದೆ. ವಿಮಾನವು ಇಳಿಯುವ ಜಾಗದಲ್ಲಿ ಅಡ್ಡವಾಗಿ ಒಂದು ಬಲಿಷ್ಠವಾದ ಹಗ್ಗವನ್ನು ಕಟ್ಟಿರಲಾಗುತ್ತದೆ. ವೇಗವಾಗಿ ಬರುವ ವಿಮಾನವು ಹಡಗಿನ ಮೇಲೆ ಇಳಿದು, ಮುಂದೆ ಸಾಗುತ್ತಿದ್ದಂತೆ ತಳಭಾಗದಲ್ಲಿರುವ ಕೊಂಡಿಯು ಹಗ್ಗಕ್ಕೆ ಸಿಲುಕಿ, ವಿಮಾನದ ವೇಗವನ್ನು ತಡೆದು, ಸ್ವಲ್ಪವೇ ದೂರದಲ್ಲಿ ಅದು ನಿಲ್ಲುವಂತೆ ಮಾಡುತ್ತದೆ. ಇದನ್ನು ಅರೆಸ್ಟ್ ಲ್ಯಾಂಡಿಂಗ್ ಎನ್ನುತ್ತಾರೆ.

ಹಡಗಿನ ಮೇಲೆ ಸ್ವಲ್ಪವೇ ರನ್‌ವೇ ಇರುವುದರಿಂದ, ಯುದ್ಧ ವಿಮಾನ ಇಳಿಯುತ್ತಿದ್ದಂತೆ ವೇಗವನ್ನು ತಡೆದು ಸ್ವಲ್ಪ ದೂರದಲ್ಲೇ ನಿಲ್ಲಿಸುವುದು ಅಗತ್ಯ.

‘ತೇಜಸ್’ನ ನೌಕಾಪಡೆ ಆವೃತ್ತಿಯಲ್ಲಿ ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಲಾಗಿದ್ದು ಗೋವಾದಲ್ಲಿ ಹಲವು ಬಾರಿ ಇದನ್ನು ಪರೀಕ್ಷಿಸಲಾಗಿದೆ. ಒಬ್ಬನೇ ವ್ಯಕ್ತಿ ಪ್ರಯಾಣಿಸಬಹುದಾದಂಥ ಎರಡು ‘ತೇಜಸ್’ ವಿಮಾನಗಳನ್ನು ನೆಲದ ಮೇಲೆ ನಿಗದಿತ ಪ್ರದೇಶದೊಳಗೆ ಅನೇಕ ಬಾರಿ ಯಶಸ್ವಿಯಾಗಿ ಇಳಿಸಲಾಗಿದೆ.

ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್ ಹಾಗೂ ಇತ್ತೀಚೆಗೆ ಚೀನಾ ಸಹ ಇಂಥ ವಿಮಾನಗಳನ್ನು ಅಭಿವೃದ್ಧಿಪಡಿಸಿದ್ದು, ಭಾರತವೂ ಶೀಘ್ರದಲ್ಲೇ ಈ ರಾಷ್ಟ್ರಗಳ ಸಾಲಿಗೆ ಸೇರುವ ತವಕದಲ್ಲಿದೆ.

ದೇಶದ ಏಕೈಕ ಯುದ್ಧವಿಮಾನ ವಾಹಕ ಹಡಗು ‘ಐಎನ್‌ಎಸ್ ವಿಕ್ರಮಾದಿತ್ಯ’ದಲ್ಲಿಈ ವಿಮಾನಗಳನ್ನು ಇಳಿಸಿ ಪರೀಕ್ಷಿಸಬೇಕಾಗಿದೆ.

ಹಡಗಿಗೆ ಹಾನಿ ಆಗದಂತೆ, ಸೆಕೆಂಡ್‌ಗೆ 7.5 ಮೀಟರ್‌ಗಿಂತ (ನಿಮಿಷಕ್ಕೆ 1,500 ಅಡಿ) ಕಡಿಮೆ ವೇಗದಲ್ಲಿ ವಿಮಾನವನ್ನು ಇಳಿಸುವ ವಿಶ್ವಾಸವನ್ನು ಪೈಲಟ್‌ಗಳು ವ್ಯಕ್ತಪಡಿಸುವವರೆಗೆ ವಿಮಾನವನ್ನು ಹಡಗಿನ ಮೇಲೆ ಇಳಿಸಲು ಅವಕಾಶ ನೀಡಲಾಗುವುದಿಲ್ಲ. ‘ಜೂನ್– ಜುಲೈ ತಿಂಗಳಲ್ಲಿ ನಿಗದಿತ ವೇಗ ಮಿತಿಯಲ್ಲಿ 60ಕ್ಕೂ ಹೆಚ್ಚು ಬಾರಿ ನಾವು ವಿಮಾನವನ್ನು ಪರೀಕ್ಷಾರ್ಥವಾಗಿ ಇಳಿಸಿದ್ದೇವೆ’ ಎಂದು ವಿಮಾನವನ್ನು ಅಭಿವೃದ್ಧಿಪಡಿಸಿದ ಎಂಜಿನಿಯರ್‌ಗಳ ತಂಡದಲ್ಲಿದ್ದವರು ತಿಳಿಸಿದ್ದಾರೆ.

ಆದರೆ, ಗೋವಾದಲ್ಲಿ ಪರೀಕ್ಷಾ ಸ್ಥಳದಲ್ಲಿ ವಿಮಾನದ ವೇಗವನ್ನು ಇಳಿಸಲು ಅಳವಡಿಸಿದ ತಂತ್ರಜ್ಞಾನ ಮತ್ತು ಐಎನ್‌ಎಸ್ ವಿಕ್ರಮಾದಿತ್ಯ ಹಡಗಿನಲ್ಲಿ ಇರುವ ತಂತ್ರಜ್ಞಾನದಲ್ಲಿ ವ್ಯತ್ಯಾಸಗಳಿವೆ ಎಂಬುದು ಎಂಜಿನಿಯರ್‌ಗಳ ಚಿಂತೆಗೆ ಕಾರಣವಾಗಿದೆ. ಇದು ಹೆಚ್ಚಿನ ವ್ಯತ್ಯಾಸ ಉಂಟುಮಾಡಲಾರದು ಎಂದು ಎಂಜಿನಿಯರ್‌ಗಳು ಹೇಳುತ್ತಿದ್ದರೂ ಹಡಗಿನಲ್ಲಿ ವಿಮಾನವನ್ನು ಇಳಿಸಿ ನೋಡುವವರೆಗೂ ಖಚಿತವಾಗಿ ಏನನ್ನೂ ಹೇಳಲಾಗದು ಎಂದಿದ್ದಾರೆ.

*ಗೋವಾದಲ್ಲಿ ಯಶಸ್ವೀ ಪರೀಕ್ಷೆ

*ನಿಗದಿತ ಸ್ಥಳದಲ್ಲಿ 60ಕ್ಕೂ ಹೆಚ್ಚು ಬಾರಿ ಇಳಿಸಿದ ಎಂಜಿನಿಯರ್‌ಗಳು

*ಸ್ವದೇಶಿ ಯುದ್ಧವಿಮಾನ ನಿರ್ಮಾಣ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.