ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಗಳು ಇವಾಂಕಾ ಟ್ರಂಪ್ ಮಂಗಳವಾರ ಭಾರತೀಯ ಉಡುಗೆ ಶೇರ್ವಾನಿ ಧರಿಸಿ ಗಮನ ಸೆಳೆದರು.

ಭಾರತದ ವಸ್ತ್ರವಿನ್ಯಾಸಕಿ ಅನಿತಾ ಡೋಂಗ್ರೆ ವಿನ್ಯಾಸ ಮಾಡಿದ್ದ ಬಿಳಿಬಣ್ಣದ ರೇಷ್ಮೆ ಶೇರ್ವಾನಿ ಧರಿಸಿದ್ದ ಇವಾಂಕಾ, ರಾಷ್ಟ್ರಪತಿ ಭವನದಲ್ಲಿ ನಡೆದ ಅಮೆರಿಕ ಅಧ್ಯಕ್ಷರ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡರು.

ಇವಾಂಕಾ ಧರಿಸಿದ್ದ ಶೇರ್ವಾನಿಯನ್ನು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ರೇಷ್ಮೆಯಿಂದ ವಿನ್ಯಾಸ ಮಾಡಲಾಗಿದೆ.

‘ಶೇರ್ವಾನಿ ಕಾಲಾತೀತ ಉಡುಗೆಯಾಗಿದ್ದು, ಈ ವಿನ್ಯಾಸವನ್ನು ಇಪ್ಪತ್ತು ವರ್ಷಗಳ ಹಿಂದೆ ಮಾಡಿದ್ದೆವು. ಆದರೂ, ಇದು ತನ್ನ ಅದ್ಭುತ ವಿನ್ಯಾಸದಿಂದ ಇಂದಿಗೂ ಸೂಕ್ತವಾಗಿದೆ. ಶೇರ್ವಾನಿ ಇಂದಿಗೂ ಅದೇ ಆಕರ್ಷಣೆ ಮತ್ತು ವರ್ಚಸ್ಸು ಉಳಿಸಿಕೊಂಡಿದೆ’ ಎಂದು ವಸ್ತ್ರವಿನ್ಯಾಸಕಿ ಅನಿತಾ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.