ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ 5 ಸಂಸದೀಯ ಕ್ಷೇತ್ರಗಳಲ್ಲಿ ಮತದಾನದ ದಿನದಂದು ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ.

ಜನರಲ್ ಅಡ್ಮಿನಿಸ್ಟ್ರೇಷನ್ ಡಿಪಾರ್ಟ್ಮೆಂಟ್ (ಜಿಎಡಿ) ಹೊರಡಿಸಿದ ಆದೇಶದ ಪ್ರಕಾರ, ಸರ್ಕಾರವು ಪ್ರಜಾಪ್ರತಿನಿಧಿ ಕಾಯ್ದೆ, 1951ರ ಅಡಿಯಲ್ಲಿ ರಜೆಯನ್ನು ಘೋಷಿಸಿದೆ.

ಆದೇಶದ ಪ್ರಕಾರ, ಏಪ್ರಿಲ್ 19 ರಂದು ಉಧಂಪುರ ಲೋಕಸಭಾ ಕ್ಷೇತ್ರದಲ್ಲಿ , ಏಪ್ರಿಲ್ 26 ರಂದು ಜಮ್ಮು ಕ್ಷೇತ್ರದಲ್ಲಿ , ಮೇ 7 ರಂದು ಅನಂತನಾಗ್-ರಾಜೌರಿ ಕ್ಷೇತ್ರದಲ್ಲಿ , ಮೇ 13 ರಂದು ಶ್ರೀನಗರ ಕ್ಷೇತ್ರದಲ್ಲಿ ಮತ್ತು ಮೇ 20 ರಂದು ಬಾರಾಮುಲ್ಲಾ ಕ್ಷೇತ್ರದಲ್ಲಿ ರಜೆ ಇರುತ್ತದೆ.

'ಒಂದು ಕ್ಷೇತ್ರದ ನಿವಾಸಿಯಾಗಿದ್ದು , ಯಾವುದೇ ವ್ಯಾಪಾರ, ಕೈಗಾರಿಕಾ ಉದ್ಯಮ ಅಥವಾ ಇತರ ಸಂಸ್ಥೆಗಳಲ್ಲಿ ಉದ್ಯೋಗಿಯಾಗಿದ್ದು, ಮತದಾರರಾಗಿ ನೋಂದಾಯಿಸಿಕೊಂಡವರು ಮತದಾನದ ದಿನದಂದು ವೇತನ ಸಹಿತ ರಜೆಯ ಪ್ರಯೋಜನಕ್ಕೆ ಅರ್ಹರಾಗಿರುತ್ತಾರೆ' ಎಂದು ಆದೇಶದಲ್ಲಿ ತಿಳಿಸಲಾಗಿದೆ.
.ಲೋಕಸಭೆ ಚುನಾವಣೆ: ಮತದಾನದ ದಿನ ವೇತನ ಸಹಿತ ರಜೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.