ಜಮ್ಮು: ಜಮ್ಮು ಮತ್ತು ಕಾಶ್ಮೀರ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ವಾರ್ಷಿಕ ಅಮರನಾಥ ಯಾತ್ರೆಗೆ ತೆರಳುವ ಯಾತ್ರಿಕರ ಮೊದಲ ತಂಡಕ್ಕೆ ಇಲ್ಲಿನ ಭಗವತಿ ನಗರ್ ಶಿಬಿರದಲ್ಲಿ ಚಾಲನೆ ನೀಡಿದ್ದಾರೆ.

ದಕ್ಷಿಣ ಕಾಶ್ಮೀರದ ಹಿಮಾಲಯದ 3,800 ಮೀಟರ್ನಷ್ಟು ಎತ್ತರದ ಪ್ರದೇಶದಲ್ಲಿರುವ ಶಿವನ ಗುಹಾ ದೇಗುಲಕ್ಕೆ ತೀರ್ಥಯಾತ್ರೆ ಕೈಗೊಳ್ಳಲು 3,400ಕ್ಕೂ ಅಧಿಕ ಯಾತ್ರಿಕರನ್ನೊಳಗೊಂಡ ಮೊದಲ ತಂಡ ಕಾಶ್ಮೀರದ ಮೂಲ ಶಿಬಿರಗಳಿಗೆ ಭಾರಿ ಭದ್ರತೆಯ ನಡುವೆ ತೆರಳಿದೆ.

62 ದಿನಗಳ ಈ ಯಾತ್ರೆಯು ಕಾಶ್ಮೀರದ ಅನಂತ ನಾಗ್ ಜಿಲ್ಲೆಯಲ್ಲಿರುವ ನುವಾನ್-ಪಹಲ್ಗಾಮ್ನ ಅವಳಿ ಮಾರ್ಗದ ಮೂಲಕ ಶನಿವಾರ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.