ಶ್ರೀನಗರ (ಜಮ್ಮು): ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ಗುಹೆಯಲ್ಲಿ ಶನಿವಾರ 21,000 ಕ್ಕೂ ಹೆಚ್ಚು ಜನರು ಪೂಜೆ ಸಲ್ಲಿಸಿದ್ದಾರೆ. ಈ ಭಾರಿಯ ವಾರ್ಷಿಕ ಯಾತ್ರೆಯ ಮೊದಲ 15 ದಿನಗಳಲ್ಲಿ ಒಟ್ಟು ಯಾತ್ರಿಕರ ಸಂಖ್ಯೆ ಎರಡು ಲಕ್ಷ ದಾಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಶನಿವಾರ 21,401 ಅಮರನಾಥ ಯಾತ್ರಾರ್ಥಿಗಳು ದರ್ಶನ ಪಡೆಯುವುದರೊಂದಿಗೆ, ಈ ವರ್ಷದ ಜುಲೈ ತಿಂಗಳ ಮೊದಲಾರ್ಧದಲ್ಲಿ ಒಟ್ಟು ಯಾತ್ರಿಕರ ಸಂಖ್ಯೆ ಎರಡು ಲಕ್ಷವನ್ನು ಮೀರಿದೆ. ಒಟ್ಟಾರೆಯಾಗಿ, ಇಲ್ಲಿಯವರೆಗೆ 2,08,415 ಭಕ್ತರು ಯಾತ್ರೆ ಕೈಗೊಂಡಿದ್ದಾರೆ’ ಎಂದು ಅಧಿಕೃತ ವಕ್ತಾರರು ಹೇಳಿದ್ದಾರೆ.

ಶನಿವಾರ ಯಾತ್ರೆ ನಡೆಸಿದವರಲ್ಲಿ 15,510 ಪುರುಷರು, 5,034 ಮಹಿಳೆಯರು, 617 ಮಕ್ಕಳು ಮತ್ತು 240 ಸನ್ಯಾಸಿಗಳು ಸೇರಿದ್ದರು. ಯಾತ್ರಾರ್ಥಿಗಳಲ್ಲಿ ಉಕ್ರೇನಿಯನ್ ಮಹಿಳೆಯೊಬ್ಬರು ಅಮರನಾಥ ಯಾತ್ರೆ ಕೈಗೊಂಡಿದ್ದು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ವ್ಯವಸ್ಥೆಯ ಬಗ್ಗೆ ಶ್ಲಾಘಿಸಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದಲ್ಲಿರುವ ಅಮರನಾಥ ಗುಹೆಯ ದೇಗುಲಕ್ಕೆ ವಾರ್ಷಿಕ ಯಾತ್ರೆಯು ಜುಲೈ 1ರಂದು ಪ್ರಾರಂಭವಾಗಿದ್ದು, ಆಗಸ್ಟ್ 31ರಂದು ಮುಕ್ತಾಯಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.