ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಅಖನೂರ್ ವಲಯದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದ ಸೇನೆಯ ನಾಲ್ಕು ವರ್ಷದ ಶ್ವಾನ ‘ಫ್ಯಾಂಟಮ್’ ಗುಂಡಿನ ದಾಳಿಯಿಂದ ಮೃತಪಟ್ಟಿದೆ.

ಸೋಮವಾರ ಭಯೋತ್ಪಾದಕರು ನಡೆಸಿದ ದಾಳಿ ವೇಳೆ ಭಾರತೀಯ ಸೈನಿಕರನ್ನು ರಕ್ಷಿಸುವ ಸಂದರ್ಭದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿತ್ತು.

2020ರ ಮೇ ತಿಂಗಳಲ್ಲಿ ಜನಿಸಿದ ಫ್ಯಾಂಟಮ್ ಶ್ವಾನವು ಬೆಲ್ಜಿಯಂನ ಮಾಲಿನಿಯೊಸ್ ತಳಿಯಾಗಿದೆ. 2022ರ ಆಗಸ್ಟ್ ತಿಂಗಳಲ್ಲಿ ಸೇನೆಗೆ ಸೇರಿತ್ತು.

‘ಅತ್ಯುನ್ನತ ಮಟ್ಟದ ತರಬೇತಿ ಪಡೆದಿದ್ದ ಫ್ಯಾಂಟಮ್, ದಟ್ಟವಾದ ಕಾಡಿನಲ್ಲಿ ಉಗ್ರರನ್ನು ಪತ್ತೆಹಚ್ಚಿ ಸೈನಿಕರಿಗೆ ನೆರವಾಗುವ ಮೂಲಕ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು. ಸೋಮವಾರ ಸೇನೆಯು ಕಾರ್ಯಾಚರಣೆ ಆರಂಭಿಸಿದ ವೇಳೆ ಸ್ಫೋಟಕಗಳನ್ನು ಪತ್ತೆಹಚ್ಚಿ, ಉಗ್ರರು ಅಡಗಿದ್ದ ಮಾರ್ಗವನ್ನು ಪತ್ತೆಹಚ್ಚಿತ್ತು. ತಕ್ಷಣವೇ ಸೈನಿಕರು ಸ್ಥಳವನ್ನು ಸುತ್ತುವರಿದು, ಕಾರ್ಯಾಚರಣೆ ನಡೆಸುವ ವೇಳೆ ಉಗ್ರರ ಗುಂಡಿನ ದಾಳಿಯಿಂದ ಗಾಯಗೊಂಡು, ಪ್ರಾಣ ಕಳೆದುಕೊಂಡಿದೆ. ಸೈನಿಕರ ಜೀವವನ್ನು ಉಳಿಸಿ, ಬಲಿದಾನ ಮಾಡಿದೆ’ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.