ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿಗೆ ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ಅವರು ಸಂಚು ರೂಪಿಸಿದ್ದರು ಎಂದು ವಿಚಾರಣಾ ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಲಾಗಿದೆ.

‘ರಾಧಾಕೃಷ್ಣನ್ ಅವರು ಅಪೊಲೊ ಆಸ್ಪತ್ರೆ ಜತೆ ಸೇರಿಕೊಂಡು ಜಯಲಲಿತಾ ಅವರಿಗೆ ಅಸಮರ್ಪಕ ಚಿಕಿತ್ಸೆ ಕೊಡಿಸಿದ್ದಾರೆ. 2016ರಲ್ಲಿ ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ಅಂದಿನ ಮುಖ್ಯಕಾರ್ಯದರ್ಶಿ ಪಿ. ರಾಮಮೋಹನ್ ಅವರು ಉದ್ದೇಶಪೂರ್ವಕವಾಗಿ ಸುಳ್ಳು ದಾಖಲೆಗಳನ್ನು ನೀಡಿದ್ದಾರೆ’ ಎಂದು ಆಯೋಗದ ಪರ ವಕೀಲ ಮೊಹಮ್ಮದ್ ಜಫರುಲ್ಲಾ ಖಾನ್ ಅವರು ಆರೋಪಿಸಿದ್ದಾರೆ.

ಈ ಇಬ್ಬರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಜಯಲಲಿತಾ ಅವರ ಸಾವಿನ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಎ. ಅರ್ಮುಗಸ್ವಾಮಿ ಆಯೋಗಕ್ಕೆ ಅವರು ಮನವಿ ಮಾಡಿದ್ದಾರೆ.

ಈ ಆರೋಪಗಳು ಆಧಾರರಹಿತ ಮಾತ್ರವಲ್ಲದೇ ಸುಳ್ಳುಸುದ್ದಿಗಳು ಎಂದು ಅಪೊಲೊ ಆಸ್ಪತ್ರೆ ಪ್ರತಿಕ್ರಿಯೆ ನೀಡಿದೆ. ರಾಧಾಕೃಷ್ಣನ್ ಅವರು ಕೂಡಾ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.