ಲಖನೌ: ಝಾನ್ಸಿ ನಗರದ ಮಹಾರಾಣಿ ಲಕ್ಷ್ಮೀ ಬಾಯಿ ವೈದ್ಯಕೀಯ ಕಾಲೇಜಿನಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಮತ್ತೊಂದು ಶಿಶು ಮೃತಪಟ್ಟಿದ್ದು, ಸಾವಿನ ಸಂಖ್ಯೆ 18ಕ್ಕೆ ಏರಿದೆ ಎಂದು ಮೂಲಗಳು ತಿಳಿಸಿವೆ.

ನವೆಂಬರ್ 15ರ ತಡರಾತ್ರಿ ‘ನವಜಾತ ಶಿಶುಗಳ ತೀವ್ರ ನಿಗಾ ಘಟಕ’ದಲ್ಲಿ (ಎನ್ಐಸಿಯು) ಬೆಂಕಿ ಹೊತ್ತಿಕೊಂಡಿತ್ತು. ಅವಘಡ ಸಂಭವಿಸಿದಾಗ ಮಕ್ಕಳ ವಾರ್ಡ್ನಲ್ಲಿ 55 ಶಿಶುಗಳು ಚಿಕಿತ್ಸೆ ಪಡೆಯುತ್ತಿದ್ದವು ಎಂದು ವರದಿಯಾಗಿತ್ತು. ಆದರೆ 49 ಶಿಶುಗಳು ಮಾತ್ರ ದಾಖಲಾಗಿದ್ದವು ಎಂದು ಆಸ್ಪತ್ರೆಯ ಆಡಳಿತ ವಿಭಾಗ ಸ್ಪಷ್ಟನೆ ನೀಡಿದೆ.
.ಚಿನ್ನ ದರ 10 ಗ್ರಾಂ ₹1 ಸಾವಿರ, ಬೆಳ್ಳಿ ದರ ಕೆ.ಜಿಗೆ ₹1,600 ಇಳಿಕೆ.ಹೆಣ್ಣುಮಕ್ಕಳಿಗೆ ಮನೆಯೂ ಸುರಕ್ಷಿತವಲ್ಲ: ವಿಶ್ವಸಂಸ್ಥೆ.
ಈ ಅವಘಡದಲ್ಲಿ 39 ಮಂದಿಯನ್ನು ರಕ್ಷಿಸಲಾಗಿತ್ತು. ಈ ವೇಳೆ ಗಾಯಗೊಂಡ ಶಿಶುಗಳಿಗೆ ಅದೇ ಆಸ್ಪತ್ರೆಯಲ್ಲಿ ಹಾಗೂ ಕೆಲವು ಮಕ್ಕಳಿಗೆ ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮತ್ತೊಂದು ಶಿಶು ಸೋಮವಾರ ಮೃತಪಟ್ಟಿದೆ. ಇದರೊಂದಿಗೆ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಆಸ್ಪತ್ರೆಯಲ್ಲಿ ನಡೆದ ಅಗ್ನಿ ಅವಘಡಕ್ಕೆ ಸ್ವಿಚ್ಬೋರ್ಡ್ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಕಾರಣ. ಈ ಅವಘಡದಲ್ಲಿ ಯಾವುದೇ ಪೂರ್ವ ನಿಯೋಜಿತ ಸಂಚು ಇಲ್ಲ ಎಂದು ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರವು ರಚನೆ ಮಾಡಿದ್ದ ನಾಲ್ವರು ಸದಸ್ಯರ ಸಮಿತಿಯು ತಿಳಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ.
.ಕ್ಯಾನ್ಸರ್ ಡಯೆಟ್: ಸ್ಪಷ್ಟನೆ ನೀಡಿದ ನವಜೋತ್ ಸಿಂಗ್ ಸಿಧು.ವಕ್ಫ್ ತಿದ್ದುಪಡಿ ಮಸೂದೆ: ಸದನ ಸಮಿತಿ ಅವಧಿ ವಿಸ್ತರಿಸಲು ವಿಪಕ್ಷಗಳ ಮನವಿ.ಹೈದರಾಬಾದ್ | ಪೂರಿ ತಿಂದ 11 ವರ್ಷದ ಬಾಲಕ ಸಾವು; ಕಾರಣವೇನು?.ದರ್ಶನ್ ಪ್ರಕರಣ: ಭಯಗೊಂಡು ಊರೂರು ಸುತ್ತಿದ್ದ ಪ್ರಮುಖ ಸಾಕ್ಷಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.