ನವದೆಹಲಿ: ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ 7 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಶುಕ್ರವಾರ ಪ್ರಕಟಿಸಿದೆ. ಇದರೊಂದಿಗೆ ಪಕ್ಷವು ಇದುವರೆಗೆ ಅಧಿಕೃತಗೊಳಿಸಿದ ಸ್ಪರ್ಧಿಗಳ ಸಂಖ್ಯೆ 28ಕ್ಕೆ ಏರಿದೆ.

ಪಕ್ಷದ ಹಿರಿಯ ನಾಯಕರಾದ ಅಜಯ್ ಕುಮಾರ್ ಹಾಗೂ ರಾಮೇಶ್ವರ್ ಓರಾನ್ ಸೇರಿದಂತೆ 21 ಅಭ್ಯರ್ಥಿಗಳನ್ನೊಳಗೊಂಡ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಸೋಮವಾರ ರಾತ್ರಿ ಪ್ರಕಟಿಸಿತ್ತು.

ತ್ರಿಪುರ, ಒಡಿಶಾ ಹಾಗೂ ನಾಗಾಲ್ಯಾಂಡ್ನಲ್ಲಿ ಪಕ್ಷದ ಉಸ್ತುವಾರಿಯೂ ಆಗಿರುವ ಅಜಯ್ ಅವರು ಜಮ್ಶೆಡ್ಪುರ ಪೂರ್ವ ಕ್ಷೇತ್ರದಿಂದ ಮತ್ತು ಹಣಕಾಸು ಸಚಿವ ಓರಾನ್ ಅವರು ಲೋಹರ್ದಗ (ಎಸ್ಟಿ) ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿತ್ತು.

ಜಾರ್ಖಂಡ್ನಲ್ಲಿ ಸದ್ಯ ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಮೈತ್ರಿಕೂಟ ಅಧಿಕಾರದಲ್ಲಿದೆ.

ಇಲ್ಲಿನ ವಿಧಾನಸಭೆ ಚುನಾವಣೆಗೆ ಮುಂದಿನ ತಿಂಗಳು (ನವೆಂಬರ್) 13 ಹಾಗೂ 20ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. 23ರಂದು ಫಲಿತಾಂಶ ಪ್ರಕಟವಾಗಲಿದೆ.

ಎರಡನೇ ಪಟ್ಟಿ: ಕ್ಷೇತ್ರವಾರು ಅಭ್ಯರ್ಥಿಗಳು

01. ಪಕೌರ್ – ನಿಶಾಂತ್ ಅಲಮ್

02. ಬರ್ಹಿ – ಅರುಣ್ ಸಾಹು

03. ಕಂಕೆ (ಎಸ್ಸಿ) – ಸುರೇಶ್ ಕುಮಾರ್ ಬೈತಾ

04. ಪಂಕಿ – ಲಾಲ್ ಸುರಾಜ್

05. ದಾಲ್ತೊಂಗಂಜ್ – ಕೆ.ಎನ್.ತ್ರಿಪಾಠಿ

06. ವಿಶ್ರಮ್ಪುರ – ಸುಧೀರ್ ಕುಮಾರ್ ಚಂದ್ರವಂಶಿ

07. ಛತರ್ಪುರ (ಎಸ್ಸಿ) – ರಾಧಾ ಕೃಷ್ಣ ಕಿಶೋರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.